ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಲಘು ವಾಹನ, ಆಟೋ ಚಾಲನೆ ತರಬೇತಿಗೆ ಅರ್ಜಿ ಆಹ್ವಾನ

Vishwanath S
Updated On : 2 Jun 2013, 12:00 pm

ಗದಗ:  2013ನೇ ಸಾಲಿನ ಎಸ್‌ಸಿಪಿ ಯೋಜನೆಯಡಿ ಪರಿಶಿಷ್ಟ ಜಾತಿಯ 24 ಅಭ್ಯರ್ಥಿಗಳು ಲಘು ಮೋಟಾರು ವಾಹನ ಚಾಲನಾ, ಆಟೋರಿಕ್ಷಾ ಭಾರಿ ಸಾರಿಗೆ ವಾಹನ ತರಬೇತಿ ನೀಡುವ ಯೋಜನೆಯಡಿ ಅರ್ಜಿ ಸಲ್ಲಿಸಲು ಜೂ. 20 ಕೊನೆಯ ದಿನವಾಗಿರುತ್ತದೆ. ಆಸಕ್ತರು ಪ್ರಾದೇಶಿಕ ಸಾರಿಗೆ ಕಚೇರಿ ಗದಗದಲ್ಲಿ ಜೂ. 12 ರೊಳಗೆ ಅರ್ಜಿ ಫಾರ್ಮ ಪಡೆಯಬಹುದಾಗಿದೆ. ಅರ್ಜಿದಾರರು ಕಡ್ಡಾಯವಾಗಿ ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಈ ಬಗ್ಗೆ ತಹಸೀಲ್ದಾರರಿಂದ ಪಡೆದ ಜಾತಿ ಪ್ರಮಾಣ ಪತ್ರವನ್ನು ಹಾಜರಪಡಿಸಬೇಕು. ಗದಗ, ನರಗುಂದ, ಶಿರಹಟ್ಟಿ, ಮುಂಡರಗಿ ಮತ್ತು ರೋಣ ತಾಲೂಕಿನ ಅಭ್ಯರ್ಥಿಗಳಿಗೆ ಮಾತ್ರ ಇದು ಒಳಪಟ್ಟಿರುತ್ತದೆ. ಲಘು ಮೋಟಾರು ವಾಹನ ತರಬೇತಿಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಆಟೋರಿಕ್ಷಾ, ಭಾರಿ ಸಾರಿಗೆ ವಾಹನ ತರಬೇತಿಗೆ ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷ ವಯಸ್ಸಾಗಿರಬೇಕು (ವಯಸ್ಸಿನ ಬಗ್ಗೆ ದಾಖಲೆ ಒದಗಿಸಬೇಕು) ಮೋಟಾರು ವಾಹನ ಚಾಲನೆ ಮಾಡಲು ದೈಹಿಕ ಅರ್ಹತೆ ಹೊಂದಿರಬೇಕು. ಅಭ್ಯರ್ಥಿಯು ಲಘು ಮೋಟಾರು ವಾಹನ, ಆಟೋರಿಕ್ಷಾ, ಭಾರಿ ಸಾರಿಗೆ ವಾಹನ ಚಾಲನಾ ತರಬೇತಿ ಸ್ಕೀಮ್‌ಗಳಲ್ಲಿ ಯಾವುದಾದರೂ ಒಂದು ವಾಹನದ ವರ್ಗಕ್ಕೆ ಮಾತ್ರ ಆಯ್ಕೆ ಮಾಡಲಾಗುವುದು. ತಹಸೀಲ್ದಾರರಿಂದ ಪಡೆದ ಆಯಾ ಪ್ರಮಾಣ ಪತ್ರ ಲಗತ್ತಿಸಬೇಕು. ತರಬೇತಿ ವೆಚ್ಚದ ಶೇ. 25ರಷ್ಟು ಆಯ್ಕೆಗೊಂಡ ಅಭ್ಯರ್ಥಿಗಳು ತರಬೇತಿಗೆ ಮುಂಚಿತವಾಗಿ ಭರಿಸುವುದು. ಒಬ್ಬ ಅಭ್ಯರ್ಥಿಯ ಲಘು ಮೋಟಾರು ವಾಹನ ತರಬೇತಿಗೆ ತಗಲುವ ಒಟ್ಟು ವೆಚ್ಚ ರು. 3 ಸಾವಿರ ಇದರಲ್ಲಿ ಇಲಾಖೆಯು ರು. 2250 ಭರಿಸಲಾಗುವುದು. ಇನ್ನುಳಿದ ರು. 750 ರು. ಅಭ್ಯರ್ಥಿಗಳು ಭರಿಸಬೇಕು. ಅದರಂತೆ ಆಟೋ ರಿಕ್ಷಾ ತರಬೇತಿಗೆ ತಗಲುವ ಒಟ್ಟು ವೆಚ್ಚ ರು. 2 ಸಾವಿರ ಇದರಲ್ಲಿ ಇಲಾಖೆಯು ರು. 1500 ಭರಿಸಲಾಗುವುದು. ಇನ್ನುಳಿದ ರು. 500 ಅಭ್ಯರ್ಥಿಗಳು ಭರಿಸಬೇಕು. ಭಾರಿ ಸಾರಿಗೆ ವಾಹನ ತರಬೇತಿಗೆ ತಗಲುವ ಒಟ್ಟು ವೆಚ್ಚ 4500 ಇದರಲ್ಲಿ ಇಲಾಖೆಯಿಂದ ರು. 3375 ಭರಿಸಲಾಗುವುದು. ಇನ್ನುಳಿದ ರು. 1125 ಅಭ್ಯರ್ಥಿಗಳು ಭರಿಸಬೇಕು. ತರಬೇತಿ ಅವಧಿಯಲ್ಲಿ ಊಟ ವಸತಿ ಸೌಲಭ್ಯ ಇರುವುದಿಲ್ಲ. ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಪಾಸಾಗಿರಬೇಕು. ಒಂದು ವೇಳೆ ಎಸ್ಸೆಸ್ಸೆಲ್ಸಿ ಅಭ್ಯರ್ಥಿಗಳು ಲಭ್ಯವಾಗದ ಪಕ್ಷದಲ್ಲಿ 8ನೇ ತರಗತಿ ಪಾಸಾಗಿರುವವರನ್ನು ಪರಿಗಣಿಸಲಾಗುವುದು. ಪರಿಶಿಷ್ಟ ಜಾತಿಯವರಿಗೆ ಲಘು ಮೋಟಾರು ವಾಹನ ಚಾಲನಾ ತರಬೇತಿಗೆ 13 ಹಾಗೂ ಆಟೋ ರಿಕ್ಷಾ ತರಬೇತಿಗೆ 4, ಭಾರಿ ಸಾರಿಗೆ 7 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದೆಂದು ಗದಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement