ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಭಿವೃದ್ಧಿ ಕಾರ್ಯಗಳಿಗೆ ಭೇದಭಾವ ಬೇಡ: ಬಿ.ಆರ್. ಯಾವಗಲ್

Mainashree
Updated On : 3 Jun 2013, 10:54 am

ಕನ್ನಡಪ್ರಭ ವಾರ್ತೆ, ಗದಗ, ಜೂ. 2
ಗ್ರಾಮದ ಕಾರ್ಯಗಳಿಗೆ ಯಾವುದೇ ರೀತಿಯ ಪಕ್ಷ ಭೇದ ಮರೆತು ಎಲ್ಲರೂ ಕೂಡಿಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡೋಣ ಎಂದು ಶಾಸಕ ಬಿ.ಆರ್.ಯಾವಗಲ್ ಹೇಳಿದರು.
ಅವರು ಈಚೆಗೆ ತಾಲೂಕಿನ ಪಾಪನಾಸಿ ಗ್ರಾಮದ ಹನುಮಂತ ದೇವರ ದೇವಸ್ಥಾನದಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರಿಗೆ ಕಾರ್ಯಕರ್ತರು ಹಾಗೂ ಅಭಿಮಾನಿ ಬಳಗದಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.  
ಜನತೆಯ ಆಶೆಯಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ನಿಚ್ಚಳ ಬಹುಮತದೊಂದಿಗೆ ಆಯ್ಕೆಯಾಗಿ ಸರ್ಕಾರವನ್ನು ರಚಿಸಿದೆ. ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಅನುಷ್ಠಾನಕ್ಕೆ ತಂದಿದ್ದಾರೆ. ಮುಂಬರುವ ದಿನಗಳಲ್ಲಿಯೂ ಸಹ ಕಾಂಗ್ರೆಸ್ ಪಕ್ಷವು ಉತ್ತಮ ರೀತಿಯಲ್ಲಿ ಆಡಳಿತವನ್ನು ನಡೆಸಲಿದೆ. ಗದಗ ತಾಲೂಕಿನ ಜನತೆಯು ಶಾಸಕರನ್ನು ಭೇಟಿಯಾಗಲು ದೂರದ ನರಗುಂದಕ್ಕೆ ಬರಬೇಕಾಗಿಲ್ಲ. ಗದಗ ನಗರದಲ್ಲಿರುವ ಜನಸಂಪರ್ಕ ಕಾರ್ಯಾಲಯಕ್ಕೆ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ತಕ್ಷಣದಲ್ಲಿಯೇ ಅವರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಾರಣ ಈ ಭಾಗದ ಜನರು ತಮ್ಮ ಸಮಸ್ಯೆಗಳನ್ನು ನೇರವಾಗಿ ನಮಗೆ ಹೇಳಿ ಅವುಗಳನ್ನು ಬಗೆಹರಿಸಿಕೊಳ್ಳಬಹುದು ಎಂದರು.
ಕೆಪಿಸಿಸಿ ಸದಸ್ಯ ವಾಸಣ್ಣ ಕುರಡಗಿ ಮಾತನಾಡಿ, ಕ್ಷೇತ್ರದಲ್ಲಿರುವ ಗ್ರಾಮೀಣ ರಸ್ತೆ ಅಭಿವೃದ್ಧಿ, ಕುಡಿವ ನೀರು  ಸೇರಿದಂತೆ ಹಲವಾರು ಸಮಸ್ಯೆಗಳಿಗೆ ತಕ್ಷಣದಲ್ಲಿಯೇ ಸ್ಪಂದಿಸಿ ಮುಂಬರುವ ದಿನಗಳಲ್ಲಿ ಅವುಗಳನ್ನು ಸಮರ್ಪಕವಾಗಿ ಜಾರಿಗೆ ಬರುವಂತೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸಯ್ಯ ಶಿರೋಳಮಠ ವಹಿಸಿದ್ದರು.
ಈ ಸಂದರ್ಭದಲ್ಲಿ ತಾಪಂನ ಮಾಜಿ ಸದಸ್ಯ ಈಶಣ್ಣ ಹುಣಸಿಕಟ್ಟಿ, ಗ್ರಾಪಂ ಸದಸ್ಯ ರಾಮಪ್ಪ ವರವಿ, ಚನ್ನಪ್ಪ ಅಂಗಡಿ, ಶಂಕ್ರಪ್ಪ ದೊಡವಾಡ, ವಸಂತಪ್ಪ ಹಂಪಣ್ಣವರ, ಶಿವಮೂರ್ತಿ ದೊಡವಾಡ, ಶಂಕ್ರಪ್ಪ ಗಡಾದ, ಕಲ್ಲಪ್ಪ ನಾಗರಾಳ, ವೆಂಕಟೇಶ ಗಡಾದ, ಅಂದಾನಯ್ಯ ಹಿರೇಮಠ, ಬಸವರಾಜ ಸಾಸ್ವಿಹಳ್ಳಿ, ಈಶಪ್ಪ ಈರಜನವರ, ರಾಮನಗೌಡ ಪಾಟೀಲ, ಶಾಂತವೀರಯ್ಯ ಕುಲಕರ್ಣಿ, ಗದಿಗೆಪ್ಪ ಚಿಮ್ಮನಕಟ್ಟಿ. ಗೆನಪ್ಪಗೌಡ ಪಾಟೀಲ  ಉಪಸ್ಥಿತರಿದ್ದರು. ಸಂಗೀತಾ ಪಾಟೀಲ ಪ್ರಾರ್ಥಿಸಿದರು. ಈಶ್ವರಗೌಡ ಪಾಟೀಲ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement