ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಾಂಗ್ರೆಸ್ ಸರ್ಕಾರ ಅತಂತ್ರ ಸ್ಥಿತಿ ಎದುರಿಸಲಿದೆ: ಕೋಡಿಮಠ ಶ್ರೀ

Rashmi Kasaragodu
Updated On : 2 Jun 2013, 11:24 am

ಗದಗ: ಇತ್ತೀಚೆಗೆ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದುಕೊಳ್ಳುವ ಮೂಲಕ ಅಧಿಕಾರದ ಗದ್ದುಗೆ ಹಿಡಿದಿದೆ. ಆದರೂ ಮುಂಬರುವ ದಿನಗಳಲ್ಲಿ ಅತಂತ್ರ ಸ್ಥಿತಿ ಎದುರಿಸಲಿದೆ ಎಂದು ಕೋಡಿಮಠದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಈ ಹಿಂದೆ ನುಡಿದ ಭವಿಷ್ಯವಾಣಿ ನಿಜವಾಗಿದೆ. ಅಂಬಲಿಯು ಹಳಸಿತು, ಕಂಬಳಿಯು ಹಾಸಿತು, ಕೈಲಾಸದಲ್ಲಿ ಕೈ ಘಂಟೆಯು ಬಾರಿಸಿತು, ಅಚ್ಚರಿಯ ಫಲಿತಾಂಶ ಬಂದಿತು, ಬಂಗಾರದ ಪಂಜರ ಭಾರವಾದಿತು ಎಂದು ಭವಿಷ್ಯ ನುಡಿದಿದ್ದೆ. ಈ ಭವಿಷ್ಯವಾಣಿ ನಿಜವಾಗಿದೆ.
ಕೈಲಾಸದ ಕೈ ಘಂಟೆಯು ಬಾರಿಸಿತು, ಅಚ್ಚರಿಯ ಫಲಿತಾಂಶ ಬಂದಿತು ಎಂದರೆ ಘಂಟೆಯನ್ನು ಬಾರಿಸುವ ಕೈ (ಕಾಂಗ್ರೆಸ್) ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಹೀನಾಯವಾಗಿ ಸೋಲಿಸಿ ಅಧಿಕಾರದ ಗದ್ದುಗೆ ಏರಿತು. ಬಂಗಾರದ ಪಂಜರ ಭಾರವಾದಿತು ಎಂದರೆ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿದರೂ ಕೂಡ ಮುಂಬರುವ ದಿನಗಳಲ್ಲಿ ಅತಂತ್ರ ಸ್ಥಿತಿಯನ್ನು ಎದುರಿಸಲಿದೆ. ಸಿಎಂ ಸಿದ್ದರಾಮಯ್ಯ ಇಲ್ಲಿಯವರೆಗೆ ಲೋಕಸಭೆ ಚುನಾವಣೆ ಎದುರಿಸಿಲ್ಲ. ಒಂದು ವೇಳೆ ಲೋಕಸಭಾ ಚುನಾವಣೆಯನ್ನು ಎದುರಿಸಿದಲ್ಲಿ ಕಾಂಗ್ರೆಸ್ಗೆ ಹಿನ್ನಡೆಯಾಗಲಿದೆ. ಒಟ್ಟಾರೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಬಹುಮತ ಹೊಂದಿದ್ದರೂ ಅತಂತ್ರ ಸ್ಥಿತಿ ಎದುರಿಸುವ ಸಂಭವವಿದೆ ಎಂದು ಭವಿಷ್ಯ ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement