ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಕ್ಕಳ ಅಂತರಾತ್ಮ ತಲುಪುವಂತೆ ಬೋಧಿಸಿ

Mainashree
Updated On : 3 Jun 2013, 10:55 am

ಗಜೇಂದ್ರಗಡ:  ಮೌಲ್ಯಾಧಾರಿತ ಅಧ್ಯಯನ ಮೂಲಕ ಸಂಪಾದಿಸಿದ ಜ್ಞಾನವನ್ನು ಮಕ್ಕಳ ಅಂತರಾತ್ಮ ತಲುಪುವಂತೆ ಶಿಕ್ಷಕರು ಬೋಧಿಸಿದಾಗ ಮಕ್ಕಳು ಅಕ್ಷರ ಜ್ಞಾನ ಹೊಂದಲು ಸಾಧ್ಯ. ಸಮುದಾಯದ ಸರ್ವರನ್ನೂ ಸಾಕ್ಷರರನ್ನಾಗಿಸುವ ಜವಾಬ್ದಾರಿ ಶಿಕ್ಷಕ ಸಮೂಹದ ಮೇಲಿದೆ ಎಂದು ಉಪನ್ಯಾಸಕ ಎಸ್.ಎನ್. ಶಿವರೆಡ್ಡಿ ಹೇಳಿದರು.
ಅವರು ಈಚೆಗೆ ಸ್ಥಳೀಯ ಎಸ್.ಎಂ. ಭೂಮರಡ್ಡಿ  ಸಂಯುಕ್ತ ಪ್ರೌಢಶಾಲೆಯಲ್ಲಿ ಸೇವಾ ನಿವೃತ್ತಿ ಹೊಂದಿದ ಶಾಲಾ ಮುಖ್ಯೋಪಾಧ್ಯಾಯ ಆರ್.ಕೆ. ಮಾಳೋದೆ  ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತ       ನಾಡಿದರು.
ಭಾಷಾ ಪ್ರಭುತ್ವ, ಸಚ್ಚಾರಿತ್ರ್ಯೆತೆ ಶಿಕ್ಷಕನಿಗೆ ಅವಶ್ಯಕ. ಕರ್ತವ್ಯ ನಿಷ್ಠೆ ಮೈಗೂಡಿಸಿಕೊಂಡು ಮಕ್ಕಳಿಗೆ ಜ್ಞಾನಾಮೃತ ನೀಡಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವಲ್ಲಿ ಶ್ರಮಿಸಬೇಕು ಎಂದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಮುಖ್ಯೋಪಾಧ್ಯಾಯ ಆರ್.ಕೆ. ಮಾಳೋದೆ ಮಾತನಾಡಿ, ಶಿಕ್ಷಕರು ಮಕ್ಕಳ ಸಂಬಂಧ ಹಾಲು ಜೇನಿನಂತೆ. ಈ ನಿಟ್ಟಿನಲ್ಲಿ ನಿರ್ಮಲ ಮನಸ್ಸಿನ ಮಕ್ಕಳ ಮನಸ್ಸನ್ನು ಅರ್ಥೈಸಿಕೊಂಡು ಪಾಠ ಮಾಡಿದಾಗ ಶಿಕ್ಷಣದ ಮೌಲ್ಯ ವೃದ್ಧಿಸುವುದು ಎಂದರು.
ಈ ಸಂದರ್ಭದಲ್ಲಿ ತಮ್ಮ ಸೇವಾವಧಿ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗಿ ಶಿಕ್ಷಕ ಸಹೋದ್ಯೋಗಿಗಳಿಗೆ ವಂದಿಸಿದರು. ನಂತರ ಸೇವಾ ನಿವೃತ್ತಿ ಹೊಂದಿದ ಮುಖ್ಯೋಪಾಧ್ಯಾಯ ಆರ್.ಕೆ. ಮಾಳೋದೆಯವರನ್ನು ಸಂಸ್ಥೆಯ ಹಾಗೂ ಶಿಕ್ಷಕವೃಂದದ   ಪರವಾಗಿ ಸನ್ಮಾನಿಸಲಾಯಿತು.
ಬಿ.ಎ. ಕೆಂಚರೆಡ್ಡಿ ಎಂ.ಎಂ. ಹಳಿಹಾಳ, ವಿ.ಎಸ್. ರಾಯನಗೌಡರ, ಬಿ.ವಿ. ಮುನವಳ್ಳಿ, ಕೆ.ಎಂ. ವಸ್ತ್ರದ, ಎಂ.ಎಚ್. ರಂಗಣ್ಣನವರ, ಜಿ.ಜಿ. ಬೋವಿ ಮುಂತಾದವರು ಪಾಲ್ಗೊಂಡಿದ್ದರು.
ಕೆ.ಬಿ. ಚಾಗರಿ ಸ್ವಾಗತಿಸಿ, ನಿರೂಪಿಸಿದರು. ಎಸ್.ಎಸ್.ನರೇಗಲ್ಲ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement