ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಕ್ಕಳಿಗೆ ಬಟ್ಟೆ ವಿತರಣೆ

Mainashree
Updated On : 3 Jun 2013, 10:58 am

ಗದಗ: ಜನಸಾಮಾನ್ಯರ ಬದುಕು ರೂಪಿಸಲು ಶ್ರಮಿಸಿದ ನಾಯಕರ ಹುಟ್ಟುಹಬ್ಬ ಸಮಾರಂಭಗಳು ಮಾನವೀಯತೆಯ ಮರು ಹುಟ್ಟಿಗೆ ಸಹಕಾರಿಯಾಗಲಿವೆ ಎಂದು ನಗರಸಭೆ ಸದಸ್ಯೆ ಜ್ಯೋತಿ ಇರಾಳ ಹೇಳಿದರು.
ಅವರು ಶನಿವಾರ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಸ್ಥಳೀಯ ಜಾಗೃತ ಯುವ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರ 46ನೇ ಹುಟ್ಟುಹಬ್ಬ ಸಮಾರಂಭದಲ್ಲಿ ಪಾಲ್ಗೊಂಡು, ಆಶ್ರಮದ ವಿದ್ಯಾರ್ಥಿಗಳಿಗೆ ಬಟ್ಟೆ ಮತ್ತು ಸಿಹಿ ವಿತರಿಸಿ ಮಾತನಾಡಿದರು.ಪುಣ್ಯಾಶ್ರಮದ ವ್ಯವಸ್ಥಾಪಕ ಬಸವರಾಜ ಹಿಡ್ಕಿಮಠ ಮಾತನಾಡಿ,  7 ವರ್ಷಗಳಿಂದ ಜಾರಕಿಹೊಳಿ ಅವರ ಹುಟ್ಟು ಹಬ್ಬವನ್ನು ಪ್ರತಿವರ್ಷ ನಿರಂತರವಾಗಿ ಆಶ್ರಮದ ವಿದ್ಯಾರ್ಥಿಗಳ ಮಧ್ಯದಲ್ಲಿ ಆಚರಿಸುತ್ತಿರುವ ಯುವ ವೇದಿಕೆಯ ಕಾರ್ಯ ಬಡಜನಹಿತಕ್ಕಾಗಿ ಸಮರ್ಪಕವಾಗಿದು,್ದ ಆಶ್ರಮದ ಭಕ್ತರಾಗಿ ಆಶ್ರಮಕ್ಕೆ ಬಹಳ ಕೊಡುಗೆ ನೀಡಿರುವ ಜಾರಕಿಹೊಳಿ ಅವರ ಪ್ರಾಮಾಣಿಕ ಸೇವೆ ಸಮರ್ಪಕವಾಗಿ ಸಮಾಜಕ್ಕೆ ದೊರೆಯಲಿ ಎಂದರು. ಜನಜಾಗೃತಿ ಯುವ ವೇದಿಕೆ ಅಧ್ಯಕ್ಷ ಪ್ರಶಾಂತ ನಾಯ್ಕರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಹಮಾಲರ ಒಕ್ಕೂಟದ ಅಧ್ಯಕ್ಷ ಅಯ್ಯಪ್ಪ ನಾಯ್ಕರ, ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ ಅಂಗಡಿ, ಬಸವರಾಜ ಸಂಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.   ಬಡ ಅಂಧ, ಅಂಗವಿಕಲ ವಿದ್ಯಾರ್ಥಿಗಳಿಗೆ ಬಟ್ಟೆ, ಸಿಹಿ ವಿತರಿಸಲಾಯಿತು. ಕೃಷ್ಣಾ ಸರ್ವದೆ, ಕುಮಾರ ಮರಿಗೌಡ್ರ, ಜಾನಗಾರ, ನವೀನ ನಾಯ್ಕರ, ಸಂಜು ಕೂಡಲ, ಈರಣ್ಣ ಟೆಂಗಿನಕಾಯಿ, ಎ.ಎಚ್.ಚಿಗರಿ, ಮಂಜುನಾಥ ಆಲಾಪುರ, ಲಿಯಾಕತ್ ಮುನಷ ಮುಂತಾದವರು ಪಾಲ್ಗೊಂಡಿದ್ದರು. ಬಸವರಾಜ ಗಡ್ಡೆಮ್ಮನವರ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement