ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಮಾಜ ಶಕ್ತಿಯಿಂದ ವ್ಯಕ್ತಿ ಹೆಮ್ಮರವಾಗಿ ಬೆಳೆಯಲು ಸಾಧ್ಯ

Mainashree
Updated On : 3 Jun 2013, 10:55 am

ಕನ್ನಡಪ್ರಭ ವಾರ್ತೆ, ಗದಗ, ಜೂ. 2
ಸಮಾಜದ ಶಕ್ತಿಯಿಂದ ವ್ಯಕ್ತಿ ಹೆಮ್ಮರವಾಗಿ ಬೆಳೆಯಲು ಸಾಧ್ಯ. ಕವಲುದಾರಿಯ ವೈಮನಸ್ಸನ್ನು ತೊರೆದು ಪ್ರತಿಯೊಬ್ಬರು ಸಮಾಜ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ವಿದ್ಯಾನಿಧಿ ಪ್ರಕಾಶನ ಮಾಲೀಕ ಜಯದೇವ ಮೆಣಸಗಿ ಹೇಳಿದರು.
ಈಚೆಗೆ ಅವರು ನಗರದ ಡಾ. ಎಸ್.ಬಿ.ಗೋವಿಂದಪ್ಪನವರ ಮನೆಯಲ್ಲಿ ನಡೆದ 20ನೇ ಕುರುಬರ ಒಡ್ಡೋಲಗದಲ್ಲಿ ಮಾತನಾಡಿದರು.
ಸಮಾಜವು ಶೈಕ್ಷಣಿಕವಾಗಿ ಹಿಂದುಳಿದಿದ್ದು, ಆರ್ಥಿಕವಾಗಿ ಸಬಲರಾದವರು 2 ಮಕ್ಕಳನ್ನು ದತ್ತು ಪಡೆದು ಮಕ್ಕಳಿಗೆ ಶಿಕ್ಷಣ ನೀಡಲು ಮುಂದೆ ಬರುವ ಮೂಲಕ ಸಮಾಜ, ತಂದೆ-ತಾಯಿ, ಗುರುವಿನ ಋಣವನ್ನು ತೀರಿಸಬೇಕು. ಮುಂದಿನ ದಿನಗಳಲ್ಲಿ ಸಂಘಟನೆಯಿಂದ ವಧು-ವರರ ಮಾಹಿತಿ ಕೇಂದ್ರ ಹಾಗೂ ಪ್ರತಿ ವರ್ಷ ಸಮಾವೇಶ, ಮಹಿಳಾ ಘಟಕ, ಪ್ರತಿಭಾ ಪುರಸ್ಕಾರ, ಯುವ ಸಮ್ಮೇಳನ ಮುಂತಾದ ಸಂಘಟನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಮಾಜದ ಮುಖಂಡ ರವಿ ದಂಡಿನ ಮಾತನಾಡಿ, ನಮ್ಮಲ್ಲಿರುವ ಕೀಳರಿಮೆಯನ್ನು ಮೊದಲು ಹೋಗಲಾಡಿಸಬೇಕು, ಸ್ವಚ್ಛ ಹಾಗೂ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಮಾಜದಿಂದ ನಿರಂತರವಾಗಿ  ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳು ನಡೆಯಲಿ. ಪ್ರಸ್ತುತ ವಸತಿ ನಿಲಯಗಳಲ್ಲಿ ಮಕ್ಕಳಿಗೆ ವಸತಿಯ ಕೊರತೆಯಿದ್ದು, ಸಮಾಜದ ಬಡಮಕ್ಕಳಿಗೆ ಶಿಕ್ಷಣಕ್ಕೆ ಸಹಾಯವಾಗಲು ನಗರದಲ್ಲಿ ಹಾಸ್ಟೆಲ್ ಅಗತ್ಯವಿದೆ. ಎಲ್ಲರ ಸಹಾಯ, ಸಹಕಾರದಿಂದ ಅದನ್ನು ನಿರ್ಮಿಸೋಣ ಎಂದರು.  
ಮಾಜಿ ಯೋಧ ಹಾಲಪ್ಪ ಹರ್ತಿ ಮಾತನಾಡಿ, ಪ್ರತಿ ಹಳ್ಳಿಯ ಮನೆ-ಮನೆಗೆ ತೆರಳಿ ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ. ಶಿಕ್ಷಣದಿಂದ ವಂಚಿತರಾದವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಅಗತ್ಯವಿದೆ ಎಂದರು. ಬಿ.ಡಿ.ಹರ್ತಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಎಸ್.ಬಿ.ಗೋವಿಂದಪ್ಪ ಅತಿಥಿಗಳಾಗಿ ಆಗಮಿಸಿದ್ದ ಡಿ.ಎಂ. ಕೆರೂರ ಮಾತನಾಡಿದರು.
ಈ ಸಂದರ್ಭದಲ್ಲಿ ಎನ್.ಎಚ್. ಗುಡಿಸಾಲಿ, ವೈ.ಕೆ.ಚೌಡಾಪುರ, ಎಸ್.ಎಚ್. ಕರಿಯಣ್ಣವರ, ಐ.ಎಚ್.ಹಳಿಯಾಳ ಉಪಸ್ಥಿತರಿದ್ದರು. ರವಿ ಜೋಗಿನ ಸ್ವಾಗತಿಸಿದರು. ಡಾ. ಅಶೋಕ ಮತ್ತಿಗಟ್ಟಿ ನಿರೂಪಿಸಿದರು. ಎಂ.ಬಿ. ದೊಡ್ಡಮನಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement