ಸುದ್ದಿ ಸಂಕ್ಷೇಪ
ಇಂದು ಧರ್ಮ ಸಭೆ
ನರಗುಂದ: ತಾಲೂಕಿನ ಕೊಣ್ಣೂರು ಗ್ರಾಮದ ಕೊಣ್ಣೂರ ಹಿರೇಮಠದ ನೂತನ ಉತ್ತರಾಧಿಕಾರಿಗಳ ಪುರ ಪ್ರವೇಶ ನಿಯುಕ್ತಿ ಸಮಾರಂಭ ಹಾಗೂ ಧರ್ಮಸಭೆ ಜೂ. 4ರ ಬೆಳಗ್ಗೆ 11.30ಕ್ಕೆ ಜರಗಲಿದೆ. ಡಾ. ಚಂದ್ರಶೇಖರ ಶಿವಾಚಾರ್ಯ ಶ್ರೀಗಳು, ಕಲಾದಗಿಯ ಪಂಚಗ್ರಹ ಹಿರೇಮಠದ ಚಂದ್ರಶೇಖರ ಶ್ರೀಗಳು, ಕೆರೂರ ಚರಂತಿಮಠದ ಡಾ. ಶಿವಕುಮಾರ ಶಿವಾಚಾರ್ಯ ಶ್ರೀಗಳು, ವೀರ ರುದ್ರಮುನಿ ಶಿವಾಚಾರ್ಯ ಶ್ರೀಗಳು, ಗುಳೇದಗುಡ್ಡ ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಶ್ರೀಗಳು, ಹೂಲಿ ಸಾಂಬಯ್ಯನ ಮಠದ ಉಮೇಶ್ವರ ಶ್ರೀಗಳು, ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು, ಭೈರಹನಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಬೆಳ್ಳೇರಿ-ಕಲಹಾಳ ಶಿವಾನಂದಮಠ ಸಚ್ಚಿದಾನಂದ ಶ್ರೀಗಳು, ಹೂಲಗೇರಿ ಕಾಡಶಿದ್ಧೇಶ್ವರಮಠದ ಗುರುದೇವಿ ಶಾಸ್ತ್ರೀಗಳು ಸಾನ್ನಿಧ್ಯ ವಹಿಸುವರು. ಶಾಸಕ ಬಿ.ಆರ್. ಯಾವಗಲ್, ಮಾಜಿ ಸಚಿವ ಸಿ.ಸಿ. ಪಾಟೀಲ, ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ಜಿಪಂ ಸದಸ್ಯ ಶಾಂತಾ ದಂಡಿನ, ತಾಪಂ ಸದಸ್ಯ ಶಾಂತವ್ವ ಯಲಿಗಾರ, ಭೀಮವ್ವ ಶಿರಹಟ್ಟಿ, ಗಾಪಂ ಅಧ್ಯಕ್ಷ ರತ್ನಾ ತೋಟದ, ಉಪಾಧ್ಯಕ್ಷ ಸಾಲಿಗೌಡ ಸಾಲಿಗೌಡ್ರ, ಸವರ್ಣ ಪಾಟೀಲ ಮುಂತಾದವರು ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.
ಗುಟ್ಕಾ ನಿಷೇಧ ಸ್ವಾಗತಾರ್ಹ
ಗದಗ: ಆಹಾರ ಭದ್ರತೆ ಮತ್ತು ಗುಣಮಟ್ಟ ಕಾಯ್ದೆಯ ಅನ್ವಯ ಆರೋಗ್ಯಕ್ಕೆ ಹಾನಿಕಾರಕವಾದ ನಿಕೋಟಿನ್ ಮತ್ತು ತಂಬಾಕು ಒಳಗೊಂಡ ಗುಟ್ಕಾ ಉತ್ಪಾದನೆ, ಮಾರಾಟ, ದಾಸ್ತಾನು ವಿತರಣೆಯನ್ನು ನಿಷೇಧಿಸಿ ಸರ್ಕಾರ ಹೊರಡಿಸಿದ ಆದೇಶಕ್ಕೆ ಬೆಟಗೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಹೇಶ ಕರಬಿಷ್ಠಿ ಸ್ವಾಗತಿಸಿದ್ದಾರೆ. ಸಮಾಜಕ್ಕೆ ಉಪಯೋಗಕಾರಕ ಇಂತಹ ಆದೇಶಗಳು ನೂತನ ಸರ್ಕಾರದಿಂದ ಇನ್ನೂ ಹೆಚ್ಚಿಗೆ ಜಾರಿಗೆ ಬರಲಿ ಎಂದು ಹಾರೈಸಿದ್ದಾರೆ.
ವಿದ್ಯಾಪೋಷಕದಿಂದ ಧನ ಸಹಾಯ
ನರಗುಂದ: ಗ್ರಾಮಾಂತರ ಪ್ರದೇಶದ ಬಡ ಮಕ್ಕಳಿಗೆ ಧಾರವಾಡದ ವಿದ್ಯಾಪೋಷಕ ಸಂಸ್ಥೆಯು ಹಲವು ವರ್ಷಗಳಿಂದ ಎಸ್ಸೆಸ್ಸೆಲ್ಸಿ ನಂತರದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಧನ ಸಹಾಯ ನೀಡಿ ಅವರ ವಿದ್ಯಾಭ್ಯಾಸ ಪೂರ್ಣಗೊಳಿಸಲು ಸಹಕರಿಸಿದೆ. ಸದ್ಯ ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿರುವ ಶಿವಚಿದಂಬರ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಚಿದಂಬರ ನಿಂಬರಗಿ ವಿದ್ಯಾಪೋಷಕ ಸಂಸ್ಥೆಯ ಫೇಸಿಲೇಟರ್ (ಸ್ವಯಂ ಸೇವಕರು) ಆಗಿ ಸಲ್ಲಿಸಿದ್ದಾರೆ. ಬಡ ವಿದ್ಯಾರ್ಥಿಗಳು ಧನ ಸಹಾಯಕ್ಕೆ ಜೂ.10 ರೊಳಗೆ ಸಂಪರ್ಕಿಸಬೇಕು. ಮಾಹಿತಿಗಾಗಿ 9008201422, 9480659056 ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.