ನೌಕರರಿಗೆ ಕಾಯಕ ನಿಷ್ಠೆ ಅಗತ್ಯ: ಕಾಳಪ್ಪನವರ
ರೋಣ: ಸರ್ಕಾರಿ ನೌಕರರು ವೃತ್ತಿ ಜೀವನದ ಸಾರ್ಥಕತೆಗೆ ಕಾಯಕ ನಿಷ್ಠೆ, ಪ್ರಾಮಾಣಿಕತೆ, ಸೇವಾ ಮನೋಭಾವನೆ ಹೊಂದಿ ಅದರಂತೆ ನಡೆದುಕೊಳ್ಳುವುದು ಅತ್ಯಗತ್ಯ ಎಂದು ಪಂಚಾಯತ್ ರಾಜ್ ಎಂಜಿನಿಯರ್ ಉಪವಿಭಾಗದ ಎಇಇ ವಿ.ಕೆ. ಕಾಳಪ್ಪನವರ ಹೇಳಿದರು.
ಅವರು ಶುಕ್ರವಾರ ಸಂಜೆ ತಾಪಂ ಸಭಾಭವನದಲ್ಲಿ ತಾಪಂ ಸದಸ್ಯರು, ಕಾರ್ಯಾಲಯ ಸಿಬ್ಬಂದಿ, ಪಂಚಾಯತ್ ರಾಜ್ ಉಪವಿಭಾಗದ ಎಂಜಿನಿಯರ್ ಮತ್ತು ಸಿಬ್ಬಂದಿ ಇವರಗಳು ಏರ್ಪಡಿಸಿದ ನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸರ್ಕಾರಿ ನೌಕರರು ಮತ್ತು ಜನಪ್ರತಿನಿಧಿಗಳು ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಪಂ ಇಓ ಎಸ್.ಎಂ. ರುದ್ರಸ್ವಾಮಿ, ಪಂಚಾಯತ್ ರಾಜ್ ಉಪವಿಭಾಗದ ಪ್ರಭಾರಿ ಎಂ.ಡಿ. ತೋಗುಣಸಿ ಮಾತನಾಡಿದರು. ತಾಪಂನ ಮಾಜಿ ಉಪಾಧ್ಯಕ್ಷ ದಶರಥ ಗಾಣಿಗೇರ, ತಾಪಂ ಸದಸ್ಯೆ ಗಾಯತ್ರಿ ನಾಗನೂರ, ಮಾಲಾನಭಿ ಗಡಾದ, ಶಿವಕುಮಾರ ಸಾಲಮನಿ, ಎಸ್.ಕೆ. ಹಾಳಕೇರಿ, ಎಸ್.ಎಸ್. ಮೇಗೂರ, ಮಲ್ಲಪ್ಪ ಪೂಜಾರ, ಬಿ.ಬಿ. ಅನಸಾರಿ, ಹೊನ್ನಮ್ಮ ಕಾಳಪ್ಪನವರ, ಬಿ.ವಿ. ಯಲಿಗಾರ, ಎಂ.ಎನ್. ಓಲೇಕಾರ ಇದ್ದರು. ಎಂ.ವಿ. ಅರಳಿಕಟ್ಟಿ ನಿರೂಪಿಸಿ, ವಂದಿಸಿದರು.