9ರಂದು ಜಂಗಮರ ವಧು-ವರರ ಸಮ್ಮೇಳನ
ಕನ್ನಡಪ್ರಭ ವಾರ್ತೆ, ಗದಗ, ಜೂ. 6
ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾ, ಗದಗ ಜಿಲ್ಲಾ ಹಾಗೂ ತಾಲೂಕು ಘಟಕದ ಆಶ್ರಯದಲ್ಲಿ ಜಂಗಮರ ವಧು-ವರರ ಸಮ್ಮೇಳನ ಜೂ. 9ರ ಬೆಳಗ್ಗೆ 10ಕ್ಕೆ ನಗರದ ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ಜಂಗಮರ ಕ್ಷೇಮಾಭಿವೃದ್ಧಿ ಮಹಾಸಭಾದ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ವಿ.ಕೆ. ಗುರುಮಠ ಹೇಳಿದರು.
ಅವರು ಗುರುವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜದ ಜನರನ್ನು ಒಗ್ಗೂಡಿಸುವ ಮೂಲಕ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮ್ಮೇಳನದಲ್ಲಿ 100 ವಧು-ವರರು ಸೇರಿದಂತೆ 1000ಕ್ಕೂ ಹೆಚ್ಚು ಸಮಾಜದ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಸೂಡಿಯ ಜುಕ್ತಿಹಿರೇಮಠದ ಡಾ. ಕೊಟ್ಟೂರು ಬಸವೇಶ್ವರ ಶಿವಾಚಾರ್ಯರು, ಅಡ್ನೂರಿನ ಪಂಚಾಕ್ಷರ ಶಿವಾಚಾರ್ಯರು ವಹಿಸುವರು.
ಅಖಿನ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾದ ರಾಜ್ಯಾಧ್ಯಕ್ಷ ಎಸ್.ಆರ್. ನವಲಿಹಿರೇಮಠ ನೇತೃತ್ವ ವಹಿಸಲಿದ್ದು, ಮಹಾಸಭಾದ ಗೌರವಾಧ್ಯಕ್ಷ ಡಾ. ಕೆ.ಕೆ.ಬಿ.ಎಂ. ಬಸಯ್ಯ ಸಭಾದ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಹಾಗೂ ಮಹಾಸಭಾದ ರಾಜ್ಯ ಸಲಹಾ ಸಮಿತಿಯ ಸದಸ್ಯ ಜಿ.ಎಸ್. ಗಡ್ಡದ್ದೇವರಮಠ ಉದ್ಘಾಟಿಸುವರು. ಅತಿಥಿಗಳಾಗಿ ಮಾಜಿ ಶಾಸಕ ಸಿ.ಎಸ್. ಮುತ್ತಿನಪೆಂಡಿಮಠ, ಬಸವಯ್ಯಶಾಸ್ತ್ರೀ ಹಿರೇಮಠ, ಸಿ.ಬಿ. ದೊಡ್ಡಗೌಡ್ರ, ಎಸ್.ಎಸ್. ಗುರುಸ್ವಾಮಿಮಠ, ವಿ.ಆರ್. ಮಾಳೆಕೊಪ್ಪಮಠ, ಬಸವರಾಜ ಶಾಬಾದಿಮಠ, ಎಸ್.ಪಿ. ಸಂಶಿಮಠ, ಬಸಣ್ಣ ಮಲ್ಲಾಡದ, ಬಾಬಣ್ಣ ಶಾಬಾದಿಮಠ, ಬಂಗಾರೇಶ ಹಿರೇಮಠ, ವಿ.ಸಿ. ಧನ್ನೂರಹಿರೇಮಠ, ಗಿರಿಜಾದೇವಿ ಹಿರೇಮಠ, ಶಶಿರೇಖಾ ಶಿಗ್ಲಿಮಠ, ಸಂಗಮ್ಮ ಹಿರೇಮಠ, ಶಿವಾನಂದ ಮಠದ, ಉಮೇಶ ಶಿರುಂಜಮಠ, ಬಸವಣ್ಣಯ್ಯ ಹಿರೇಮಠ ಆನಂದ ತೋಟಗಂಟಿಮಠ, ಸದಾಶವಯ್ಯ ಮದರಿಮಠ, ಆರ್.ಕೆ. ಕುಲಕರ್ಣಿ ಆಗಮಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಸಂಚಾಲಕ ಬೆಟದಯ್ಯ ಹಿರೇಮಠ, ಆರ್.ಎಂ. ಹಿರೇಮಠ, ಮಲ್ಲಯ್ಯಸ್ವಾಮಿ ಹಾನಗಲ್ಲಮಠ, ವಿಜಯಕುಮಾರ ಹಿರೇಮಠ, ಎಸ್.ಎಸ್. ಗುರುಸ್ವಾಮಿಮಠ, ವಿ.ಕೆ. ಗುರುಮಠ, ವಿ.ಸಿ. ಧನ್ನೂರಹಿರೇಮಠ, ಪಿ.ಎ. ಹಿರೇಮಠ, ಜಿ.ಎಫ್. ಕೆಂಬಾವಿಮಠ, ಬಿ.ಎಸ್. ಮುಗುಂಡಮಠ, ಶಿವಯ್ಯ ಹಿರೇಮಠ, ಬಸವರಾಜ ಗಣಾಚಾರಿ, ಸಿ.ಬಿ. ದೊಡ್ಡಗೌಡ್ರ ಮುಂತಾದವರು ಉಪಸ್ಥಿತರಿದ್ದರು.