ಮಾನವನ ದುರಾಸೆಯಿಂದ ಪರಿಸರಕ್ಕೆ ಹಾನಿ: ಕುಲಕರ್ಣಿ
ಗಜೇಂದ್ರಗಡ: ಮಾನವನ ದುರಾಸೆಗೆ ಅಮೂಲ್ಯ ಪರಿಸರ ನಶಿಸುತ್ತಿದೆ. ಹೀಗೆ ಮುಂದುವರಿದರೆ ಜೀವ ಸಂಕುಲಕ್ಕೆ ಮಾರಕ ಖಂಡಿತ ಎಂದು ಮುಖ್ಯೋಪಾಧ್ಯಾಯಿನಿ ಎಂ.ಬಿ. ಕುಲಕರ್ಣಿ ಅಭಿಪ್ರಾಯಪಟ್ಟರು.
ಬುಧವಾರ ಸ್ಥಳೀಯ ಎಸ್.ಎಂ. ಭೂಮರಡ್ಡಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೆ.ಬಿ. ಚಾಗರಿ, ಎಂ.ಎಚ್. ರಂಗಣ್ಣನವರ, ಎಂ.ವಿ. ನಾಡಗೇರ, ವಿ.ವೈ. ಸುಣಗಾರ, ಎಸ್.ಎಸ್. ನರೇಗಲ್, ಐ.ಎಸ್. ಹಾಸೀಮನವರ, ಸಿ.ಎಸ್. ಹಿರೇಮಠ, ಎಂ.ಎಂ. ಕರೇಪುಟ್ಟಣ್ಣವರ, ಲಕ್ಷ್ಮೀದೇವಿ ಎಂ, ಸಿ.ಎಸ್. ಮೂರಸಿಳ್ಳೀನ, ಎನ್.ಎನ್. ವಾಲಿಕಾರ ಇದ್ದರು.