ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ದಾಜಿಬಾನಪೇಟ ಸುತ್ತ ಫುಟ್‌ಪಾತ್ ತೆರವು ಕಾರ್ಯಾಚರಣೆ

Mainashree
Updated On : 8 Jun 2013, 10:46 am

ಹುಬ್ಬಳ್ಳಿ: ರಸ್ತೆ ಬದಿ ವ್ಯಾಪಾರಕ್ಕಿಟ್ಟಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳುವ ಮೂಲಕ ಮಹಾನಗರ ಪಾಲಿಕೆ ಅಧಿಕಾರಿಗಳು ಗುರುವಾರವೂ ಫುಟ್‌ಪಾತ್ ತೆರವು ಕಾರ್ಯಾಚರಣೆ ಮುಂದುವರೆಸಿದರು. 'ಕನ್ನಡಪ್ರಭ' ಪ್ರಕಟಿಸಿದ 'ಫುಟ್‌ಪಾತ್ ಹೈಜಾಕ್‌' ಸರಣಿ ವಿಶೇಷ ವರದಿಗೆ ಸ್ಪಂದಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳು, ಫುಟ್‌ಪಾತ್ ತೆರವು ಕಾರ್ಯಾಚರಣೆಯನ್ನು ಕಳೆದ ನಾಲ್ಕು ದಿನಗಳಿಂದ ಮುಂದುವರೆಸಿದ್ದಾರೆ. ಗುರುವಾರದಂದು ದಾಜಿಬಾನಪೇಟ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಫುಟ್‌ಪಾತ್ ಮೇಲೆ ಮಾರಾಟಕ್ಕಿಟ್ಟಿದ್ದ ಸೈಕಲ್, ತರಕಾರಿ, ನಾಮಫಲಕ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಂಡರು.  ದಾಜಿಬಾನಪೇಟದಲ್ಲಿ ವಾಹನ ಸಂಚಾರ ಹಾಗೂ ಜನ ಸಂಚಾರ ಹೆಚ್ಚಾಗಿದ್ದು, ಫುಟ್‌ಪಾತ್ ಅತಿಕ್ರಮಣದಿಂದ ಹೆಚ್ಚು ಅಡಚಣೆಯಾಗಿತ್ತು. ಅಂಗಡಿಗಳ ಮಾಲೀಕರು ಫುಟ್‌ಪಾತ್‌ನಲ್ಲಿ ವ್ಯಾಪಾರದ ಸಾಮಗ್ರಿಗಳನ್ನು ಇಟ್ಟಿದ್ದರಿಂದ ಸಾರ್ವಜನಿಕರು ರಸ್ತೆ ಮೇಲೆಯೇ ಸಂಚರಿಸುತ್ತಿದ್ದರು. ಇದರಿಂದಾಗಿ ದಾಜಿಬಾನಪೇಟದಲ್ಲಿ ಸದಾ ವಾಹನಗಳ ದಟ್ಟಣೆ ಇರುತ್ತಿತ್ತು.  ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸಿದ್ದರಿಂದ ಸಾರ್ವಜನಿಕರು ರಸ್ತೆ ಮೇಲೆ ತಿರುಗಾಡುವುದು ಸಹಜವಾಗಿಯೇ ಕಡಿಮೆಯಾಗಿದೆ. ಇದರಿಂದಾಗಿ ವಾಹನ ಸಂಚಾರಕ್ಕೂ ಅನುಕೂಲವಾಗಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement