ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುದ್ದಿ ಸಂಕ್ಷೇಪ

Mainashree
Updated On : 8 Jun 2013, 11:00 am

10ರಂದು ಮುಳಗುಂದದಲ್ಲಿ ಸಾಹಿತ್ಯ ಸಮ್ಮೇಳನ
ಗದಗ:
ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನವು ತಾಲೂಕಿನ ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದಲ್ಲಿ ಜೂ. 10 ರಂದು ಜರುಗಲಿದೆ. ಬೆಳಗ್ಗೆ 7.15ಕ್ಕೆ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮವನ್ನು ಚಂದ್ರಶೇಖರ ಬಡ್ನಿ ನೆರವೇರಿಸುವರು. ಪರಿಷತ್ತಿನ ಧ್ವಜಾರೋಹಣವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ನೆರವೇರಿಸುವರು. 9 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನೆರವೇರಿಸುವರು. ನಿಕಟಪೂರ್ವ ಅಧ್ಯಕ್ಷ ಗುರುಸ್ವಾಮಿ ಕಲಕೇರಿ, ಸಮ್ಮೇಳನಾಧ್ಯಕ್ಷ ರಾಮಣ್ಣ ಬ್ಯಾಟಿ, ಪ್ರೊ. ಬಿ. ಸುಕನ್ಯಾ, ಶಾಸಕ ಜಿ.ಎಸ್. ಪಾಟೀಲ, ಬಿ.ಆರ್. ಯಾವಗಲ್ಲ, ರಾಮಕೃಷ್ಣ ದೊಡ್ಡಮನಿ, ಕಸಾಪ ರಾಜ್ಯಾಧ್ಯಕ್ಷ ಪುಂಡಲಿಕ ಹಾಲಂಬಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ಶ್ರೀಶೈಲಪ್ಪ ಬಿದರೂರ, ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ತಾಪಂ ಅಧ್ಯಕ್ಷ ಅಬ್ದುಲ್ ಕರೀಂ ಕೆರೂರ, ಆರ್.ಎನ್ ದೇಶಪಾಂಡೆ, ಗುರಣ್ಣ ಬಳಗಾನೂರ, ತಹಸೀಲ್ದಾರ್ ಜಯಶ್ರೀ ಶಿಂತ್ರೆ, ಬನಶಂಕರಿ ಅಂಗಡಿ ಉಪಸ್ಥಿತರಿರುವರು. ವಿವಿಧ ವಿಷಯಗಳ ಮೇಲೆ ಹಲವಾರು ಗೋಷ್ಠಿಗಳು ಜರುಗಲಿವೆ. ಸಮಾರೋಪ ಸಮಾರಂಭದಲ್ಲಿ ರಾಮಣ್ಣ ಬ್ಯಾಟಿ ಸಮ್ಮೇಳನಾಧ್ಯಕ್ಷರ ಭಾಷಣ ಮಾಡುವರು. ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ಡಾ. ಶಿವಣ್ಣ ಕುರಿ ವಹಿಸುವರು. ಅತಿಥಿಗಳಾಗಿ ಹಾವೇರಿ ಸಂಸದ ಶಿವಕುಮಾರ ಉದಾಸಿ, ವಿಪ ಸದಸ್ಯ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಮಹಾಂತಪ್ಪ ಬಡ್ನಿ, ಶಿವಣ್ಣ ನೀಲಗುಂದ, ಸಂಗಮೇಶ ಬಾದವಾಡಗಿ, ಸಿ.ಕೆ. ರಾಮೇಗೌಡ, ಡಿ.ಎಸ್. ತಳವಾರ, ವೈ.ಕೆ. ಚೌಡಾಪುರ ಆಗಮಿಸುವರು ಎಂದು ಕಸಾಪ ತಾಲೂಕು ಘಟಕದ ಪ್ರಕಟಣೆ ತಿಳಿಸಿದೆ.

ಗುಟ್ಕಾ ನಿಷೇಧ: ಸ್ವಾಗತ
ಗದಗ:
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ ಗುಟ್ಕಾ ನಿಷೇಧ ಮಾಡಿದ್ದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ರಾಜ್ಯ ಕೆಪಿಸಿಸಿ ಅಲ್ಪಸಂಖ್ಯಾತರ ಜಂಟಿ ಕಾರ್ಯದರ್ಶಿ ಉಮರಪಾರೂಖ್ ಹುಬ್ಬಳ್ಳಿ, ಗದಗ ವಿಧಾನಸಭಾ ಮತಕ್ಷೇತ್ರದ ಯುವ ಕಾಂಗ್ರೆಸ್ ಐ ಪಕ್ಷದ ಉಪಾಧ್ಯಕ್ಷ ಅಶೋಕ ಮಂದಾಲಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಗುಟ್ಕಾ ನಿಷೇಧದಿಂದ ಯುವಕರು ದುಶ್ಚಟದಿಂದ ದೂರ ಸರಿಯಲಿದ್ದಾರೆ. ಯುವಕರು ರಾಷ್ಟ್ರ ಕಟ್ಟುವುದರಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಗುಟ್ಕಾ ನಿಷೇಧಿಸಿದ್ದು ಅತ್ಯಂತ ಸ್ವಾಗತಾರ್ಹವಾಗಿದೆ.

ಗಜೇಂದ್ರಗಡ: ವಾರ್ಷಿಕೋತ್ಸವ: ಬಟ್ಟೆ, ಹಣ್ಣು ವಿತರಣೆ
ಗಜೇಂದ್ರಗಡ:
ಸ್ಥಳೀಯ ಗೆಳೆಯರ ಬಳಗ 2ನೇ ವಾರ್ಷಿಕೋತ್ಸವ ಪ್ರಯುಕ್ತ ಗುರುವಾರ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಬಟ್ಟೆ, ಹಣ್ಣು ವಿತರಿಸಿದರು. ಭಗವಾನ್ ಮಹಾವೀರ ಜೈನ್ ಆಯುರ್ವೇದಿಕ್ ಮಹಾವಿದ್ಯಾಲಯದ ಕಾರ್ಯದರ್ಶಿ ಅಜಿತ್ ಬಾಗಮಾರ ಮಾತನಾಡಿ, ಸ್ನೇಹ, ಪ್ರೀತಿ, ವಾತ್ಸಲ್ಯಕ್ಕೆ ಮಿಗಿಲಾದದ್ದು ಇನ್ನೊಂದಿಲ್ಲ. ಈ ಹಿನ್ನೆಲೆಯಿಂದ ಎಲ್ಲರೂ ಕೂಡಿರುವ ಇಂದು ತಮ್ಮ ಬಾಲ್ಯದ ನೆನಪುಗಳನ್ನು ಮೆಲಕು ಹಾಕುವ ಉದ್ದೇಶದಿಂದ ಹಾಗೂ ಈ ಸಂಭ್ರಮಾಚರಣೆ ಚಿರಸ್ಥಾಯಿಯಾಗಿ ಉಳಿಯುವುದಕ್ಕೆ ರೋಗಿಗಳಿಗೆ ಕೊಂಚ ಆಧಾರವಾಗುವ ಕೊಡುಗೆ ನೀಡಲು ಮುಂದಾಗಿದ್ದೇವೆ ಎಂದರು. ವರ್ತಕ ಆನಂದ ಮಂತ್ರಿ ಮಾತನಾಡಿ, ಈ ಗೆಳೆಯರ ಬಳಗ ವತಿಯಿಂದ ಇನ್ನಷ್ಟು ಫಲಾಪೇಕ್ಷೆ ಇಲ್ಲದ ಸಾಮಾಜಿಕ ಪ್ರಾಮಾಣಿಕ ಸೇವೆ ನಿರಂತರ ನಡೆಯಲಿದೆ ಎಂದರು. ಮದನ್ ಭಾಹಿತೆ, ರಾಘವೇಂದ್ರ ಗೊಂಧಳೆ, ವರ್ಧಮಾನ ಬಾಗಮಾರ, ಮೋಹನ ಕನಕೇರಿ, ಗುರು ನಾವಡೆ, ವ್ಯದ್ಯಾಧಿಕಾರಿ ಅಮೃತ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement