ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಆಯುರ್ವೇದ ಔಷಧಿಯಿಂದ ಅಸ್ತಮಾ ನಿವಾರಣೆ: ವೈದ್ಯ ಬಾಬುರಾವ್

Mainashree
Updated On : 9 Jun 2013, 11:53 am

ಲಕ್ಷ್ಮೇಶ್ವರ: ಆಯುರ್ವೇದದಲ್ಲಿ ಮಾತ್ರ ಅಸ್ತಮಾ ರೋಗಕ್ಕೆ ಸರಿಯಾದ ಔಷಧ ಲಭ್ಯವಿರುತ್ತದೆ. ಅಸ್ತಮಾ ರೋಗಕ್ಕೆ ಆಯುರ್ವೇದ ಔಷಧಿಯು ರಾಮ ಭಾಣವಾಗಿದೆ. ಅದಕ್ಕಾಗಿ ನಮ್ಮ ಪುರಾತನ ಔಷಧ ಪದ್ಧತಿಯಲ್ಲಿ ಆಯುರ್ವೇಧ ಔಷಧಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ ಎಂದು ವೈದ್ಯ ಬಾಬುರಾವ ಕುಲಕರ್ಣಿ ಅಭಿಪ್ರಾಯಪಟ್ಟರು.
ಅವರು ಶನಿವಾರ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ ನಂ. 1ರಲ್ಲಿ ಬೆಳಗ್ಗೆ 10.58ಕ್ಕೆ ಅಸ್ತಮಾ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತ ಮಂತ್ರೌಷಧಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿ ವರ್ಷ ಸೂರ್ಯನು ಮೃಗಶೀರ ನಕ್ಷತ್ರವನ್ನು ಪ್ರವೇಶಿಸುವ ವೇಳೆಯಲ್ಲಿ ಆಯುರ್ವೇದ ಮೂಲಿಕೆಗಳಿಂದ ತಯಾರಿಸಿದ ಈ ಔಷಧವನ್ನು ಸೇವನೆ ಮಾಡುವುದರಿಂದ ಅಸ್ತಮಾ ರೋಗವನ್ನು ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಸುಮಾರು 49 ವರ್ಷಗಳಿಂದ ಮೃಗಶೀರ ಮಳೆಯ ಆರಂಭದಲ್ಲಿ ಈ ಔಷಧಿಯನ್ನು ಉಚಿತವಾಗಿ ವಿತರಣೆ ಮಾಡುತ್ತಿದ್ದೇನೆ. ಪ್ರತಿ ವರ್ಷ ಈ ಔಷಧಿಯನ್ನು ಸೇವನೆ ಮಾಡಿ ಸಾವಿರಾರು ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡಿದ್ದು ಸಂತಸ ತಂದಿದೆ. ಔಷಧಿ ಪಡೆದುಕೊಳ್ಳಲು ದೇಶದ ನಾನಾ ಭಾಗಗಳಿಂದ ಜನರು ಆಗಮಿಸುತ್ತಿದ್ದಾರೆ. ನಾನು ಹೇಳುವ ಕೆಲವೊಂದು ಆಹಾರ ಪದ್ಧತಿಯನ್ನು ಅನುಸರಿಸಿಕೊಂಡು ಹೋದಲ್ಲಿ ಈ ರೋಗವು ಮತ್ತೆ ನಿಮ್ಮ ಬಳಿ ಸುಳಿಯುವುದಿಲ್ಲ. ಆಯುರ್ವೇದ ಪದ್ಧತಿಯಲ್ಲಿ ಎಲ್ಲ ರೋಗಗಳ ನಿವಾರಣೆಗೆ ಔಷಧವನ್ನು ಕಂಡು ಹಿಡಿದಿದ್ದಾರೆ. ಆದರೆ, ಅಲೋಪತಿ ವೈದ್ಯ ಪದ್ಧತಿಯಲ್ಲಿ ಇನ್ನೂ ಸಾಕಷ್ಟು ರೋಗಗಳಿಗೆ ಔಷಧವನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಅದಕ್ಕಾಗಿ ಅಸ್ತಮಾ ರೋಗಕ್ಕೆ ಆಯುರ್ವೇದ ಔಷಧಿಯು ರಾಮಭಾಣವಾಗಿದೆ ಎಂದರು.
ಕಪ್ಪತಗುಡ್ಡ ಆಯುರ್ವೇದದ ಖನಿಜ: ಕಪ್ಪತ್ತಗುಡ್ಡವು ಆಯುರ್ವೇದ ಔಷಧಿಯ ಖನಿಜವಾಗಿದೆ. ಇಲ್ಲಿನ ವನಸ್ಪತಿ ಸಸ್ಯಗಳಿಂದ ಇನ್ನಿತರ ಗಿಡಿ ಮೂಲಿಕೆಗಳಿಂದ ಈ ಔಷಧಿಯನ್ನು ತಯಾರಿಸಲಾಗಿದೆ. ಹಿಮಾಲಯ ಹಾಗೂ ಮತ್ತಿತರ ಪ್ರದೇಶಗಳಲ್ಲಿ ಸಂಚರಿಸಿ ಈ ವಿದ್ಯೆಯನ್ನು ಕರಗತ ಮಾಡಿಕೊಂಡಿದ್ದೇನೆ ಎಂದರು. ಪ್ರೊ. ಸಿ.ವಿ. ಕೆರಿಮನಿ ಮಾತನಾಡಿ, ಅಸ್ತಮಾ ರೋಗವು ಇಂದು ಹಸುಗೂಸಿನಿಂದ ಹಿಡಿದು ವೃದ್ಧರವರೆಗೂ ಕಾಡುತ್ತದೆ. ಇದಕ್ಕೆ ವೈದ್ಯ ಬಾಬುರಾವ ಕುಲಕರ್ಣಿಯವರು ಉಚಿತವಾಗಿ ಔಷಧಿಯನ್ನು ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು. ವಿರಪಾಪುರ-ಕಲಕೇರಿ ಹಿರೇಮಠದ ಮಧುಕೇಶ್ವರ ಶ್ರೀಗಳು ಮಾತನಾಡಿದರು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಅಸ್ತಮಾ ರೋಗಿಗಳು ಶನಿವಾರ ಬೆಳಗ್ಗೆ ಔಷಧವನ್ನು ಸೇವಿಸಿದರು. ಹಲವು ರೋಗಿಗಳು 5-6 ವರ್ಷಗಳಿಂದ ಸತತವಾಗಿ ಔಷಧವನ್ನು ಸೇವಿಸಿ ತಮ್ಮ ರೋಗಕ್ಕೆ ಪರಿಹಾರವನ್ನು ಕಂಡುಕೊಂಡಿರುವುದಾಗಿ ಹೇಳಿಕೊಂಡಿದ್ದು ವಿಶೇಷವಾಗಿತ್ತು. ಡಾ. ಎಂ.ಎಸ್. ಕೌಲಗುಡ್ಡ, ಪುರಸಭೆಯ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ವಿ.ಜಿ. ಪಡಗೇರಿ, ಎಲ್.ಸಿ. ಲಿಂಬಯ್ಯಸ್ವಾಮಿಮಠ, ಮಾಜಿ ಸದಸ್ಯ ನಿಂಗಪ್ಪ ಬನ್ನಿ, ಕೃಷ್ಣಾ ಕುಲಕರ್ಣಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement