ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಾನ್ಸಂಟೋ ಕಂಪನಿಯಿಂದ ಪರಿಸರ ರಕ್ಷಣಾ ಜಾಥಾ

Mainashree
Updated On : 9 Jun 2013, 11:52 am

ರೋಣ:  ಮಾನ್ಸಂಟೋ ಬೀಜೋತ್ಪಾದನಾ ಕಂಪನಿಯಿಂದ ತಾಲೂಕಿನ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ತೆರಳಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪರಿಸರ ವಿನಾಶದಿಂದಾಗುವ ದುಷ್ಪರಿಣಾಮ, ಪರಿಸರ ರಕ್ಷಣೆಯ ಮಹತ್ವ ಹಾಗೂ ಪರಿಸರ ರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಪ್ರಾತ್ಯಕ್ಷಿಕೆ ಮತ್ತು ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಿದರು.
ತಾಲೂಕಿನ ಲಕ್ಕಲಕಟ್ಟಿ, ವೀರಾಪುರ, ರಾಜೂರ, ದಿಂಡೂರ, ಕಾತ್ರಾಳ, ಕರಮಡಿ, ಚಿಲಝೇರಿ, ನಿಡಗುಂದಿ, ಶಿರಗುಂಪಿ ಸೇರಿದಂತೆ ಅನೇಕ ಶಾಲೆಗಳಿಗೆ ತೆರಳಿ ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭ ಮಾನ್ಸಂಟೋ ಬೀಜೋತ್ಪಾದನಾ ಕಂಪನಿಯ ಸ್ವರಣ್ ಸಿ ಮಾತನಾಡಿ, ನಮ್ಮ ಸುತ್ತಲಿನ ಪರಿಸರವನ್ನು ಸುಂದರವಾಗಿ ಕಾಣಲು ಹೆಚ್ಚಿನ ಪ್ರಮಾಣದಲ್ಲಿ ಗಿಡ ಮರಗಳನ್ನು ಬೆಳೆಸಬೇಕು. ಅನೇಕ ಸಸಿಗಳಲ್ಲಿ ಔಷಧಿಯ ಗುಣಗಳಿವೆ. ಯಾವುದೇ ಸಸಿಯನ್ನು ಕಡೆಗಣಿಸದೇ ಜೋಪಾನ ಮಾಡಬೇಕು. ಸಮಯಕ್ಕೆ ಸರಿಯಾಗಿ ಮಳೆಯಾಗದೆ ಇರುವುದಕ್ಕೆ ಗಿಡ-ಮರಗಳ ವಿನಾಶ ಮತ್ತು ಪರಿಸರದ ಅಸಮತೋಲನ ಮುಖ್ಯ ಕಾರಣವಾಗಿದೆ ಎಂದರು. ಟಿ.ವಿ. ಪಾಟೀಲ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಪರಿಸರದ ರಕ್ಷಣೆ ಕುರಿತು ಉಪನ್ಯಾಸ ನೀಡಿದರು. ವಿವಿಧೆಡೆ ಜರುಗಿದ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಪರಿಸರ ರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಗ್ರಾಮದಾದ್ಯಂತ ಘೋಷಣೆ ಕೂಗುತ್ತಾ ಸಂಚರಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement