ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಿವೃತ್ತಿ ಜೀವನ ಸುಖಮಯವಾಗಿರಲಿ: ಗಾಣಿಗೇರ

Vishwanath S
Updated On : 11 Jun 2013, 11:08 am

ಹೊಳೆಆಲೂರು: ಸರ್ಕಾರಿ ಸೇವಾವಧಿಯ ನಂತರದ ನಿವೃತ್ತಿ ಜೀವನ ನಿಮ್ಮ ನೆಮ್ಮದಿಯ ಸುಖ, ಸಂತೋಷದ ಕ್ಷಣಗಳನ್ನು ತರುವಂತಾಗಲಿ ಎಂದು ಹೊಳೆಆಲೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಶರಥ ಗಾಣಿಗೇರ ಹೇಳಿದರು.
ಈಚೆಗೆ ಅವರು ರೋಣ ತಾಪಂ ಸಭಾಭವನದಲ್ಲಿ ನಡೆದ ಸರ್ಕಾರಿ ಸೇವಾ ನಿವೃತ್ತಿ ಹೊಂದಿದ ವ್ಯಕ್ತಿಗಳ ಸನ್ಮಾನ ಸಮಾರಂಭದಲ್ಲಿ ಸೇವಾ ನಿವೃತ್ತರಾದ ಹೊಳೆಆಲೂರಿನ ಬಿ.ಬಿ. ಅನ್ಸಾರಿ ಹಾಗೂ ಇತರರಿಗೆ ಸನ್ಮಾನಿಸಿ ಮಾತನಾಡಿದರು.
ಸೇವಾವಧಿಯ ಸಂದರ್ಭದಲ್ಲಿ ಕರ್ತವ್ಯಕ್ಕೆ ಹೆಚ್ಚು ಮಹತ್ವ ನೀಡಿ ಪ್ರಾಮಾಣಿಕವಾದ ಸೇವೆ ಸಲ್ಲಿಸಿದರೆ ನಿವೃತ್ತಿಯ ನಂತರ ನೆಮ್ಮದಿ ತಾನೇ ಅರಸಿಕೊಂಡು ಬರುತ್ತದೆ. ಅಧಿಕಾರವಿದ್ದಾಗ ಸರ್ವರೊಂದಿಗೆ ಹೊಂದಾಣಿಕೊಂಡು ನ್ಯಾಯಯುತವಾಗಿ ಕೆಲಸ ಮಾಡಿದಲ್ಲಿ ನಿವೃತ್ತಿ ನಂತರ ಹೆಚ್ಚಿನ ಗೌರವ ಸಿಕ್ಕುತ್ತದೆ ಎಂದರು.
ತಾಪಂ ಕಾರ್ಯನಿವಾಹಕ ಅಧಿಕಾರಿ ಎಸ್.ಎಂ. ರುದ್ರಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸನ್ಮಾನ ಸ್ವೀಕರಿಸಿದ ಬಿ.ಬಿ. ಅನ್ಸಾರಿ ಮಾತನಾಡಿ, ಸೇವಾವಧಿಯಲ್ಲಿ ವೇತನಕ್ಕಾಗಿ ದುಡಿಯದೇ ಸಮಾಜದ ಏಳ್ಗೆಗಾಗಿ ದುಡಿಯಬೇಕು. ಸಮಾಜದ ಋಣ ತೀರಿಸಬೇಕು. ಪ್ರತಿ ಕೆಲಸ ದೇವರ ಕೆಲಸವೆಂದು ನಂಬಿ ಸಾಗಬೇಕು ಎಂದು ಸೇವಾವಧಿಯಲ್ಲಿ ಸಹಕಾರ ನೀಡಿದ ಸರ್ವಸಿಬ್ಬಂದಿಗಳನ್ನು ಸ್ಮರಿಸಿಕೊಂಡರು.
ಇದೇ ಸಂದರ್ಭದಲ್ಲಿ ನಿವೃತ್ತರಾದ ಎಇಇ ವೀರಪ್ಪ ಕಾಳಪ್ಪನವರ ಹಾಗೂ 5 ಜನ ಪಿಡಿಓ ಅಧಿಕಾರಿಗಳನ್ನು ಸನ್ಮಾನಿಸಿದರು. ಇದೇ ರೀತಿ ತಮ್ಮ ಸೇವಾ ದಿನಗಳ ಕಾರ್ಯ ಮತ್ತು ಸಿಬ್ಬಂದಿಗಳ ಸಹಕಾರವನ್ನು ಇತರರು ನೆನಪಿಸಿಕೊಂಡರು. ತಾಪಂ ಸಿಬ್ಬಂದಿ, ಜಿಪಂ ಸಿಬ್ಬಂದಿ ವರ್ಗ, ಅಧಿಕಾರಿ ವರ್ಗದವರು ಪಾಲ್ಗೊಂಡಿದ್ದರು. ಬಳ್ಳೂರ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಎಸ್.ಎಂ. ಹಳ್ಳಿಕಟ್ಟಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement