ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಾಳೆ ಸಮಾವೇಶ

Lingaraj Badiger
Updated On : 2 Mar 2013, 10:49 am

ಲಕ್ಷ್ಮೇಶ್ವರ:  ಶಿರಹಟ್ಟಿ ತಾಲೂಕು  ವೀರಶೈವ ಪಂಚಮಸಾಲಿ ಸಮಾವೇಶ ಹಾಗೂ ವೀರ ರಾಣಿ ಕಿತ್ತೂರ ಚೆನ್ನಮ್ಮಳ 189ನೇ ವಿಜಯೋತ್ಸವವನ್ನು ಮಾ. 3ರಂದು ಶಿಗ್ಲಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ವೀರಣ್ಣ ಹತ್ತಿಕಾಳ ಹೇಳಿದರು. ಈಚೆಗೆ ಅವರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಶಿರಹಟ್ಟಿ ತಾಲೂಕಾ ವೀರಶೈವ ಪಂಚಮಸಾಲಿ ಸಮಾವೇಶವನ್ನು ಹಾಗೂ ಸಂಘದ ವಾರ್ಷಿಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ಮಾ. 3 ರ ಬೆಳಗ್ಗೆ 9ಗಂಟೆಗೆ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭವಾಗುವ ಮೆರವಣಿಗೆಯು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮತ್ತೆ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸುವುದು. ನಂತರ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾವೇಶ ಜರಗುವುದು. ಸಮಾವೇಶಕ್ಕೆ ಸಮಾಜದ ಅನೇಕ ಗಣ್ಯರು, ರಾಜಕೀಯ ಮುಖಂಡರು ಆಗಮಿಸುವರು. ಗ್ರಾಮದ ಎಲ್ಲ ಸಮಾಜದ ಸಹಾಯ ಸಹಕಾರದೊಂದಿಗೆ ಸಮಾವೇಶವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಸ್ಥರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು ಎಂದರು. ತಾಪಂ ಮಾಜಿ ಸದಸ್ಯ ಎಫ್.ಕೆ. ಕಾಳಪ್ಪನವರ, ಶಿವಣ್ಣ ಕೆಸರಳ್ಳಿ, ಫಕ್ಕಿರೇಶಪ್ಪ ತೋಟದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement