ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗವಾಯಿಗಳ ತತ್ವಾದರ್ಶ ಮಾದರಿ

Lingaraj Badiger
Updated On : 4 Mar 2013, 12:27 pm

ಕನ್ನಡಪ್ರಭ ವಾರ್ತೆ, ಗದಗ, ಮಾ. 3
ಸಂಗೀತ, ಸಾಹಿತ್ಯ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿರುವ ಗವಾಯಿಗಳ ತತ್ವಾದರ್ಶಗಳು ಎಲ್ಲರಿಗೂ ಮಾದರಿಯಾಗಿವೆ ಎಂದು ನಾಡೋಜ ಡಾ೤ ಅನ್ನದಾನೀಶ್ವರ ಮಹಾಸ್ವಾಮಿಗಳು ಕರೆ ನೀಡಿದರು.
ನಗರದ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಕವಿ ಗವಾಯಿಗಳವರ ಸಭಾಭವನದಲ್ಲಿ ಭಾನುವಾರ ಸಂಜೆ ನಡೆದ ಲಿಂ. ಹಾನಗಲ್ಲ ಗುರು ಕುಮಾರಸ್ವಾಮಿಗಳವರ 83ನೇ ಪುಣ್ಯಸ್ಮರಣೋತ್ಸವ ಹಾಗೂ ಲಿಂ. ಡಾ೤ ಪುಟ್ಟರಾಜ ಕವಿಗವಾಯಿಗಳ 99ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಮಾಜಿ ಸಚಿವ ಎಚ್.ಕೆ. ಪಾಟೀಲ ಮಾತನಾಡಿ, ದೇಶ-ವಿದೇಶಗಳಲ್ಲಿ ಸಂಚರಿಸಿ ಸಂಗೀತ ಹಾಗೂ ಸಾಹಿತ್ಯದ ಕೀರ್ತಿ ಹೆಚ್ಚಿಸಿರುವ ಮಹಾನ್ ಚೇತನಗಳ ಸಾಲಿನಲ್ಲಿ ಪುಟ್ಟರಾಜರು ಮುಂಚೂಣಿಯಲ್ಲಿದ್ದರು. ಅವರು ಈ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಶ್ಲಾಘನೀಯ ಎಂದರು.
ಧಾರವಾಡ-ಮುಳಗುಂದ ಮುರುಘಾಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು. ಅಡ್ನೂರ ದಾಸೋಹ ಮಠದ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಬಿಜಾಪುರದ ಜ್ಞಾಯೋಗಾಶ್ರವುದ ಸಿದ್ದೇಶ್ವರ ಮಹಾಸ್ವಾಮಿಗಳು ಉದ್ಘಾಟಿಸಿದರು. ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಸಮ್ಮುಖ ವಹಿಸಿದ್ದರು. ಶಾಸಕ ಶ್ರೀಶೈಲಪ್ಪ ಬಿದರೂರ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜಗುರು ಗುರುಸ್ವಾಮಿ ಗವಾಯಿಗಳು ಹಾಗೂ ಡಾ೤ ಶರಣಬಸವ ವೆಂಕಟಾಪುರ ಉಪನ್ಯಾಸ ನೀಡಿದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ವೀರೇಶ್ವರ ಪುಣ್ಯಾಶ್ರಮ ಗದಗ-ದಾವಣಗೆರೆ ಸೋಲ್ ಟ್ರಸ್ಟ್ ಅಧ್ಯಕ್ಷ ನಿಂಗಪ್ಪ ಕೆಂಗಾರ, ಉಪಾಧ್ಯಕ್ಷ ಪ್ರಕಾಶ ಬಸರಿಗಿಡದ, ಕಾರ್ಯದರ್ಶಿ ಬಸವರಾಜ ಹಿಡ್ಕಿಮಠ, ಪ್ರಭುಲಿಂಗಯ್ಯ ಹಿರೇಮಠ, ಶಿವರುದ್ರಪ್ಪ ಇಟಗಿ, ವಸಂತಗೌಡ ಪೊಲೀಸ್‌ಪಾಟೀಲ, ಪರಶುರಾಮ ಕಟ್ಟಿಮನಿ, ಚನ್ನಬಸಯ್ಯ ಬಂಕಾಪುರಮಠ ಉಪಸ್ಥಿತರಿದ್ದರು. ಬಳಿಕ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ವಿಜೇತ ಪಂ. ಎಂ. ವೆಂಕಟೇಶ ಕುಮಾರ, ಆಕಾಶವಾಣಿ ಕಲಾವಿದರಾದ ಡಿ. ಕುಮಾರದಾಸ, ಬಾಲಚಂದ್ರ ನಾಕೋಡ, ಬಿ.ಎಸ್. ಮಠ, ಅಕ್ಕಮಹಾದೇವಿ ಮಠ, ವೀರೇಶ ಕಿತ್ತೂರ, ಕೇಶವಕುಮಾರ ಮಾಲ್ವಿ ಇವರಿಂದ ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಡೆಯಿತು. ಕೀರ್ತನಕಾರ ಸಿದ್ದೇಶ್ವರಶಾಸ್ತ್ರಿ ತೆಲ್ಲೂರ, ಗುರುಸಿದ್ದೇಶ್ವರಶಾಸ್ತ್ರಿ ಬೇವೂರ, ಹೇಮರಾಜ ಶಾಸ್ತ್ರಿ, ಮಡಿವಾಳೇಶ್ವರ ಶಾಸ್ತ್ರಿ ಮತ್ತು ಇತರರಿಂದ ಕೀರ್ತನೆ ಜರುಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement