ಬಣವೆಗಳಿಗೆ ಆಕಸ್ಮಿಕ ಬೆಂಕಿ
ನರೇಗಲ್ಲ: ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಮೂರು ಬಣವೆಗಳು ಸಂಪೂರ್ಣ ಸುಟ್ಟುಹೋಗಿ, ರು. 1.65 ಲಕ್ಷ ನಷ್ಟ ಸಂಭವಿಸಿದ ಘಟನೆ ಸಮೀಪದ ಅಬ್ಬಿಗೇರಿ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ಗುರುಲಿಂಗಪ್ಪ ನೀರಲೋಟಿ ಅವರಿಗೆ ಸೇರಿದ ಬಣವೆ, ತೇಗದ ಚಕ್ಕಡಿ ಗಾಲಿ, ಕಡಲೆ ಹಾಗೂ ಒಕ್ಕಲುತನದ ಸಾಮಗ್ರಿಗಳು ಸುಟ್ಟಿವೆ. ಬಸಪ್ಪ ನೀರಲೋಟಿ ಹಾಗೂ ಬಸವಣ್ಣೆಪ್ಪ ಮಡಿವಾಳ ಅವರ ತಲಾ ಒಂದು ಬಣವೆ ಭಸ್ಮವಾಗಿವೆ. ಬಣವೆಗಳ ಪಕ್ಕದಲ್ಲಿದ ಶೆಡ್‌ಗೂ ಬೆಂಕಿ ಆವರಿಸಿ, 25ಕ್ಕೂ ಅಧಿಕ ತಗಡುಗಳು ಹಾಳಾಗಿವೆ. ಶೆಡ್‌ನಲ್ಲಿದ್ದ 2 ದನ, ಕರು ಹಾಗೂ ಎಮ್ಮೆಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಆಗಮಿಸಿದ ಮೂರು ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟು, ಕೊನೆಗೂ ಯಶಸ್ವಿಯಾದವು. ನರೇಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.