ಶಾಸಕ ರಾಮಣ್ಣ ಲಮಾಣಿ ಭರ್ಜರಿ ರೋಡ್ ಶೋ
ಲಕ್ಷ್ಮೇಶ್ವರ: ಪುರಸಭೆಯ ಮತದಾನ ದಿನ ಹತ್ತಿರವಾಗುತ್ತಿದ್ದಂತೆ ಚುನಾವಣೆಯ ಕಾವು ಜೋರು ಪಡೆದುಕೊಳ್ಳುತ್ತಿದೆ. ಶತಾಯ ಗತಾಯ ಲಕ್ಷ್ಮೇಶ್ವರ ಪುರಸಭೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂಬ ರೀತಿಯಲ್ಲಿ ಶಾಸಕ ರಾಮಣ್ಣ ಲಮಾಣಿ ಪ್ರಯತ್ನ ನಡೆಸಿರುವುದು ಕಂಡುಬರುತ್ತಿದೆ.
3-4 ದಿನಗಳಿಂದ ಸತತವಾಗಿ ಪಟ್ಟಣದ ಎಲ್ಲ ವಾರ್ಡ್‌ಗಳನ್ನು ಸುತ್ತಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಸೋಮವಾರ ಬೆಳಗಿನಿಂದಲೇ ಪಟ್ಟಣದ ಮತದಾರರ ಮನೆ ಬಾಗಿಲಿಗೆ ಹೋಗಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದಾರೆ. ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಬಿಜೆಪಿ ಅಭ್ಯರ್ಥಿಗಳೊಂದಿಗೆ ಪಟ್ಟಣದ ದೂದಪೀರಾ ದರ್ಗಾ, ಹಳ್ಳದಕೇರಿ ಓಣಿ, ಕೆಂಚಲಾಪುರ ಓಣಿ, ಸೊಪ್ಪಿನಕೇರಿ ಓಣಿ, ಬಸ್ತಿ ಬಣ, ಇಂದಿರಾ ನಗರ, ವಿನಾಯಕ ನಗರ, ಲಕ್ಷ್ಮಿ ನಗರ, ಅಂಬೇಡ್ಕರ್ ನಗರ ಹಾಗೂ ಬಜಾರ್ ರಸ್ತೆಯ ಮೂಲಕ ಸಾಗಿ ಎಲ್ಲರ ಮನಗೆಲ್ಲಲು ರೋಡ್ ಶೋ ನಡೆಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಎಂ.ಎಸ್. ದೊಡ್ಡಗೌಡರ, ಚೆಂಬಣ್ಣ ಬಾಳಿಕಾಯಿ, ಬಸಣ್ಣ ಹತ್ತಿಕಾಳ, ಸೋಮಣ್ಣ ಮುಳಗುಂದ, ಚೆನ್ನಪ್ಪ ಕೋಲಕಾರ, ಸಿದ್ದನಗೌಡ ಬೊಳ್ಳಳ್ಳಿ, ನಿಂಗಪ್ಪ ಬನ್ನಿ, ಜಗದೀಶ ಪುರಾಣಿಕಮಠ, ನಾಗರಾಜ ಚಿಂಚಲಿ, ಗಣೇಶ ಬೇವಿನಮರದ, ದೇವಪ್ಪ ಕುಂಬಾರ. ಸೋಮು ಉಪನಾಳ, ನೀಲಪ್ಪ ಹತ್ತಿ, ಸುಬಾನ್ ಹೊಂಬಳ, ಡಿ.ಬಿ. ಬಳಗಾರ ಮುಂತಾದವರು ಭಾಗವಹಿಸಿದ್ದರು.