ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರು. 1 ಲಕ್ಷ ದೇಣಿಗೆ

Lingaraj Badiger
Updated On : 7 Mar 2013, 11:33 am

ಗದಗ: ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ 99ನೇ ಹುಟ್ಟು ಹಬ್ಬದಂದು ಗದುಗಿನ ಡಾ.ಪುಟ್ಟರಾಜ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿಗೆ ನಗರದ ಡಾ. ಶಾಂತಾದೇವಿ ಭೂಮರಡ್ಡಿ ಇವರು ದಿ. ಡಾ. ವೆಂಕಣ್ಣ ಭೂಮರಡ್ಡಿ ಅವರ ಸ್ಮರಣಾರ್ಥವಾಗಿ ರು. 1 ಲಕ್ಷ ದೇಣಿಗೆಯಾಗಿ ನೀಡಿದರು. ಡಾ. ಪುಟ್ಟರಾಜ ಕವಿ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿಯ ಶ್ರೇಯೋಭಿವೃದ್ಧಿಗೆ ಈ ದೇಣಿಗೆ ಸದ್ವಿನಿಯೋಗವಾಗಲಿ ಎಂಬ ಸದಾಶಯದೊಂದಿಗೆ ಹಣವನ್ನು ದೇಣಿಗೆಯಾಗಿ ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಡಾ. ಜಗದೀಶ ಭೂಮರಡ್ಡಿ, ಅಂಜಲಿದೇವಿ ಭೂಮರಡ್ಡಿ, ಅನಿತಾ ಭೂಮರಡ್ಡಿ, ನಿತಿನ್ ಪಾಟೀಲ, ಆನಂದ ಭೂಮರಡ್ಡಿ, ಅನುರಾಧಾ ಭೂಮರಡ್ಡಿ, ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಎಲ್.ವಿ. ಮುದ್ದಣ್ಣನವರು, ಸಮಿತಿಯ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಜಿ.ಎಸ್.ಪಾಟೀಲ ಹಾಗೂ ಸಮಿತಿಯ ಸದಸ್ಯ ಎಸ್.ಎಂ. ಗೌಡರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement