ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ಸಾಧಕರಿಗೆ ಪ್ರಶಸ್ತಿ ಪ್ರದಾನ

Parashurama
Updated On : 8 Mar 2013, 11:23 am

ರೋಣ:  ಕೃಷಿ, ಸಾಹಿತ್ಯ, ಕಲೆ, ಜನಪದ, ವಾಸ್ತು ಶಿಲ್ಪ, ವಿಜ್ಞಾನ ಹೀಗೆ ಮುಂತಾದ ಕ್ಷೇತ್ರಗಳಲ್ಲಿ ಅಭೂತ ಪೂರ್ವ ಸಾಧನೆ ಗೈದ ಸಾಧಕರನ್ನು ಗುರುತಿಸಿ ಪ್ರತಿ ವರ್ಷವು ಪ್ರಶಸ್ತಿ ಪುರಸ್ಕಾರವನ್ನು  ಪ್ರದಾನ ಮಾಡಲಾಗುತ್ತಿದ್ದು, ಮಾ 8 ರಂದು ಸಂಜೆ 4.30 ಗಂಟೆಗೆ ಜರುಗುವ ಗ್ರೀನ್‌ವಡ್ ಇಂಟರನ್ಯಾಶನಲ್ ಸ್ಕೂಲ್ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸ್ಕೂಲ್‌ನ ಅಧ್ಯಕ್ಷ ಅವಿನಾಶ ಸಾಲಮನಿ ಹೇಳಿದರು. ಅವರು ಬುಧವಾರ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸ್ಥೆಯು ಅನೇಕ ವರ್ಷಗಳಿಂದ ವಿವಿಧ ರೀತಿಯ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಂದಿದೆ. ಪ್ರತಿ ವರ್ಷವು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರನ್ನು ಗೌರವಿಸಿ, ಪ್ರಶಸ್ತಿ ಪ್ರದಾನ ಮಾಡಿ ಸಾಧನೆಯನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿದೆ. 2013 ನೇ ಸಾಲಿನಲ್ಲಿ ತಾಲೂಕಿನ ಕೊತಬಾಳ ಗ್ರಾಮದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಅರುಣೋದಯ ಕಲಾ ತಂಡದ ಅಧ್ಯಕ್ಷ ಶಂಕ್ರಣ್ಣ ಸಂಕಣ್ಣವರಿಗೆ ಸಿದ್ರಾಮೇಶ್ವರ ವಿದ್ಯಾವರ್ಧಕ ಸಂಸ್ಥೆ ಹಾಗೂ ಗ್ರೀನ್ ವುಡ್ ಇಂಟರನ್ಯಾಶನಲ್ ಸ್ಕೂಲ್ ವತಿಯಿಂದ ಪ್ರಶಸ್ತಿ ಕೊಡಮಾಡಲಾಗುವುದು ಎಂದರು. ಸಮಾರಂಭದ ಸಾನ್ನಿಧ್ಯವನ್ನು ಗುಲಗಂಜಿ ಮಠದ ಗುರುಪಾದ ಶ್ರೀಗಳು ವಹಿಸುವರು. ಅಧ್ಯಕ್ಷತೆಯನ್ನು ಅವಿನಾಶ ಸಾಲಮನಿ ವಹಿಸುವರು. ಉದ್ಘಾಟನೆಯನ್ನು ಬಿಜೆಪಿಯ ಎಸ್.ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಬಸವಂತಪ್ಪ ತಳವಾರ ನೆರವೇರಿಸುವರು. ಅತಿಥಿಗಳಾಗಿ ಹೇಮಗಿರೀಶ ಹಾವಿನಾಳ, ಮಿಥುನ್ ಪಾಟೀಲ, ಸುಭಾಷಚಂದ್ರ ದಾನರಡ್ಡಿ, ವೆಂಕನಗೌಡ ಗೋವಿಂದಗೌಡ್ರ, ವಿ.ಎನ್.ಅಮಾತಿಗೌಡ್ರ, ಸಂಗು ನವಲಗುಂದ, ಸಿದ್ದು ಪಾಟೀಲ, ಸಂಜಯ ರಡ್ಡೇರ, ಕೆ.ವಿ.ಹೂಗಾರ ಉಪಸ್ಥಿತರಿರುವರು ಎಂದರು. ಸುದ್ದಿಗೋಷ್ಠಿಯಲ್ಲಿ ಶೇಖರ ಸಾಲಮನಿ, ಜಗದೀಶ ಅಳ್ಳೋಳ್ಳಿ, ಸುಭೋದಚಂದ್ರ ರಾಬಾ, ರಾಠೋಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments