ಅನ್ಯಾಯ ಪ್ರತಿಭಟಿಸಿ: ವೀಣಾ
ಗದಗ: ಶತ ಶತ ಮಾನಗಳಿಂದ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ತುಳಿತಕ್ಕೊಳಗಾಗಿದ್ದು, ಮಹಿಳೆಯರು ಜಾಗೃತರಾಗಿ ಶೋಷಣೆಯ ವಿರುದ್ಧ ಧ್ವನಿಯೆತ್ತಬೇಕು ಎಂದು ಜೆ.ಟಿ. ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕಿ ಡಾ. ವೀಣಾ ಹೂಗಾರ ಕರೆ ನೀಡಿದರು.
ಅವರು ಶುಕ್ರವಾರ ಪಂ. ಪಂಚಾಕ್ಷರಿ ಗವಾಯಿಗಳ ಸಂಗೀತ ಮಹಾವಿದ್ಯಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂದಿಗೂ ನಮ್ಮ ದೇಶದಲ್ಲಿ ಮಹಿಳೆಯು ತುಳಿತಕ್ಕೊಳಗಾಗಿದ್ದು, ಅನ್ಯಾಯವನ್ನು ನಿರ್ಮೂಲನೆ ಮಾಡಬೇಕಿದೆ ಎಂದರು. ಅಕ್ಕಮಹಾದೇವಿ ಹಿರೇಮಠ ಮಾತನಾಡಿ, ಮಹಿಳೆ ಆಟೋರಿಕ್ಷಾದಿಂದ ಹಿಡಿದು ಅಂತರಿಕ್ಷದವರೆಗೆ ಎಲ್ಲ ರಂಗದಲ್ಲಿ ಸಾಧನೆ ಮಾಡುತ್ತಿದ್ದರೂ ಅವಳಿಗೆ ಸಿಗಬೇಕಾದ ಸ್ಥಾನಮಾನ ಸಿಕ್ಕಿಲ್ಲ. ಅವಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿರುವುದು ಮುಂದುವರಿದ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ ಎಂದರು. ಸ್ಥಾನಿಕ ಸಮಿತಿಯ ಆಧ್ಯಕ್ಷ. ಎಸ್.ಎಂ. ಗೌಡರ, ಹಾಗೂ ಅಧ್ಯಕ್ಷತೆ ವಹಿಸಿದ್ದ ಪ್ರಾ. ವಿ.ಎಂ. ಗುರುಮಠ ಮಾತನಾಡಿದರು. ಡಾ. ವೀಣಾ ಹೂಗಾರರವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಸುಮಿತ್ರಾ ಹಿರೇಮಠ, ಪಿ.ವಿ. ಶೇಷಗಿರಿ, ಮಹಾಲಕ್ಷ್ಮೀ ಹೆಗಡೆ ಅಂಬಿಕಾ. ಎನ್. ಮುಂತಾದವರು ಉಪಸ್ಥಿತರಿದ್ದರು. ಡಾ. ಲತಾ ವೃತ್ತಿಕೊಪ್ಪ ಸ್ವಾಗತಿಸಿದರು. ಸುಮಿತ್ರಾ ಹಿರೇಮಠ ನಿರೂಪಿಸಿದರು. ಮಹಾಲಕ್ಷ್ಮೀ ಹೆಗಡೆ ವಂದಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.