ಶಾಲೆಗಳಿಂದ ಶಿಕ್ಷಣದ ಪ್ರಗತಿ
ಕನ್ನಡಪ್ರಭ ವಾರ್ತೆ, ರೋಣ, ಮಾ. 9
ಕೋಟ್ಯಂತರ ರು. ಖರ್ಚು ಮಾಡಿ ದೇವಾಲಯಗಳನ್ನು ನಿರ್ಮಿಸುವುದರ ಬದಲು ಹೆಚ್ಚಿನ ಪ್ರಮಾಣದಲ್ಲಿ ಶಾಲೆಗಳನ್ನು ತೆರೆದಲ್ಲಿ ಶಿಕ್ಷಣದ ಪ್ರಗತಿ ಆಗುವುದರೊಂದಿಗೆ ದೇಶವು ಅಭಿವೃದ್ಧಿ ಪಥದತ್ತ ಸಾಗುತ್ತದೆ ಎಂದು ಬಿಜೆಪಿ ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷ ಬಸವಂತಪ್ಪ ತಳವಾರ ಹೇಳಿದರು.
ಅವರು ಶುಕ್ರವಾರ ಸಂಜೆ ಪಟ್ಟಣದ ಗ್ರೀನ್ವುಡ್ ಇಂಟರನ್ಯಾಶನಲ್ ಇಂಗ್ಲಿಷ್ ಮಾಧ್ಯಮ ಶಾಲೆಯ 2012-13ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಮಾನವೀಯ ಮೌಲ್ಯ, ನೈತಕತೆ ಮತ್ತು ಪ್ರಬುದ್ಧತೆಯ ನೆಲೆಗಟ್ಟನ್ನು ತುಂಬಲು ಪ್ರಾಥಮಿಕ ಶಾಲಾ ಹಂತವು ಮಹತ್ವದ ಘಟ್ಟವಾಗಿದೆ. ಈ ಹಂತದಲ್ಲಿ ಮಕ್ಕಳ ಮನಸ್ಸು ಹೂವಿನಂತಿರುತ್ತದೆ. ನಾವು ಏನನ್ನು ಕಲಿಸುತ್ತೇವೆ. ಅದನ್ನು ಕಲಿಯುತ್ತದೆ. ಆದ್ದರಿಂದ ಉತ್ತಮ ನಡೆ, ನುಡಿ, ಆಚಾರ ವಿಚಾರಗಳನ್ನು ಕಲಿಸಬೇಕು ಎಂದರು.
ರಾಜ್ಯ ಪ್ರಶಸ್ತಿ ವಿಜೇತ ಶಂಕ್ರಣ್ಣ ಸಂಕಣ್ಣವರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಹೇಮಗರೀಶ ಹಾವಿನಾಳ, ಮಿಥುನ್ ಪಾಟೀಲ, ಕೆ.ವಿ. ಹೂಗಾರ, ಸಿದ್ದು ಪಾಟೀಲ, ಸುಭಾಸಚಂದ್ರ ದಾನರಡ್ಡಿ ಹಾಗೂ ಸಾನ್ನಿಧ್ಯ ವಹಿಸಿದ್ದ ಗುಲಗಂಜಿ ಮಠದ ಗುರುಪಾದ ಶ್ರೀಗಳು ಮಾತನಾಡಿದರು. ಅಧ್ಯಕ್ಷತೆಯನ್ನು ಅವಿನಾಶ ಸಾಲಮನಿ ವಹಿಸಿದ್ದರು.ಅತಿಥಿಗಳಾಗಿ ಶೇಖರ ಸಾಲಮನಿ, ವಿ.ಎನ್.ಅಮಾತಿಗೌಡ್ರ, ಸಂಗು ನವಲಗುಂದ, ಸಂಜಯ ರಡ್ಡೇರ, ಮಹಾದೇವಪ್ಪ ನವಲಗುಂದ, ಕುಲಕರ್ಣಿ ಉಪಸ್ಥಿತರಿದ್ದರು. ಸುನೀತಾ ರಾಬಾ ನಿರೂಪಿಸಿದರು. ಮುಖ್ಯೋಪಾಧ್ಯಾಯ ಸುಬೋದಚಂದ್ರ ರಾಬಾ ಸ್ವಾಗತಿಸಿದರು. ಜಗದೀಶ ಅಳ್ಳೊಳ್ಳಿ ವಂದಿಸಿದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.