ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗೊಂದಲಗಳ ಮಧ್ಯೆ ಮತ ಎಣಿಕೆ

Parashurama
Updated On : 12 Mar 2013, 11:15 am

ಗದಗ: ತೀವ್ರ ಕುತೂಹಲ ಕೆರಳಿಸಿದ್ದ ಸ್ಥಳೀಯ ಸಂಸ್ಥೆಗಳ ಮತ ಎಣಿಕೆ ಕಾರ್ಯ ಸಣ್ಣ ಪುಟ್ಟ ಗೊಂದಲಗಳ ಮಧ್ಯೆ ಯಶಸ್ವಿಯಾಗಿ ಮುಗಿದಿದೆ. ಗದಗ ನಗರದ 29ನೇ ವಾರ್ಡ್ ಮತ ಎಣಿಕೆ ವೇಳೆ ಚುನಾವಣಾ ಸಿಬ್ಬಂದಿಯಿಂದ ಲೋಪವಾಗಿದೆ ಎಂದು ಆರೋಪಿಸಿ, ತಾಸಿಗೂ ಹೆಚ್ಚು ಕಾಲ ಮತ ಎಣಿಕೆ ವಿಳಂಬವಾದ ಘಟನೆ ಜರುಗಿತು.
ಚುನಾವಣಾ ಸಿಬ್ಬಂದಿ ಇಬ್ಬರೂ ಅಭ್ಯರ್ಥಿಗಳಿಂದ ಲಿಖಿತ ದೂರನ್ನು ಪಡೆದು ನಂತರ ಎಣಿಕೆ ಪ್ರಾರಂಭಿಸಿದರು. 30ನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಜ್ಯೋತಿ ಇರಾಳ ಗೆಲವು ಸಾಧಿಸಿದ್ದು, ಅವರ ಅಭಿಮಾನಿಗಳು ಗದಗ ನಗರದ ಹಳೆ ಬಸ್ ನಿಲ್ದಾಣ ಸಮೀಪ ವಿಜಯೋತ್ಸವ ಆಚರಿಸುತ್ತಿದ್ದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದು, ತ್ವೇಷಮಯ ವಾತಾವರಣ ಉಂಟಾಯಿತು.
ಮಧ್ಯ ಪ್ರವೇಶಿಸಿದ ಪೊಲೀಸರು ಗುಂಪು ಚದುರಿಸಲು ತಮ್ಮ ಬೆತ್ತದ ರುಚಿ ತೋರಿಸುತ್ತಿದ್ದಂತೆ ಪರಿಸ್ಥಿತಿ ಹತೋಟಿಗೆ ಬಂತು. ನಗರದ ರಾಜೀವಗಾಂಧಿ ಬಡಾವಣೆಯಲ್ಲೂ ಬಿಎಸ್ಸಾರ್ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಗೊಂದಲ ಉಂಟಾಯಿತು. ವಾರ್ಡ್ 27ನಲ್ಲಿ ಚುನಾಯಿತ ಸದಸ್ಯ ಬಿ.ಬಿ. ಅಸೂಟಿ ಮತದಾರರೊಂದಿಗೆ ಅಗೌರವದಿಂದ ಮಾತನಾಡಿದ್ದಾರೆ ಎಂದು ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬುಳ್ಳಾ ಪ್ಲಾಟ್ ಭಾಗದಲ್ಲೂ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು.
ಸೋತ ಪ್ರಮುಖರು: 4ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಹಿಂದಿನ ಅವಧಿಯ ಅಧ್ಯಕ್ಷ ಶಿವಪ್ಪ ಮುಳಗುಂದ ಅವರ ಪುತ್ರ ಮಂಜುನಾಥ ಸೋಲುಂಡಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ 28ನೇ ವಾರ್ಡ್‌ನಲ್ಲಿ ಬಿಎಸ್ಸಾರ್ ಅಭ್ಯರ್ಥಿ ಈರಮ್ಮ ಹಿರೇಮಠ ಒಂದೇ ಮತದ ಅಂತರದಲ್ಲಿ ಸೋತರು. ಇವಿಎಂನಲ್ಲಿ ಇಬ್ಬರಿಗೂ 467 ಮತ ಬಂದು ಫಲಿತಾಂಶ ಟೈ ಆಗಿತ್ತು. ಅಂಚೆ ಮತಗಳನ್ನು ತೆರೆದಾಗ ಕಾಂಗ್ರೆಸ್ ಅಭ್ಯರ್ಥಿ ಶಿವಲೀಲಾ ಅಕ್ಕಿ ಅವರಿಗೆ ಒಂದು ಮತ ಬಂದು ಅವರು ಗೆಲುವಿನ ನಗೆ ಬೀರಿದರು. ಇದೇ ವಾರ್ಡ್‌ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಿಂದಿನ ಅವಧಿ ಅಧ್ಯಕ್ಷೆ, ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಉಗಲಾಟ ಹಾಗೂ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿ ಕಾಂಗ್ರೆಸ್ ಬೆಂಬಲಿಸಿದ್ದ 5 ಬಿಜೆಪಿ ಸದಸ್ಯರು ಸೋತು ಸುಣ್ಣವಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments