ಇಂದು ಉದ್ಯೋಗ ಮೇಳ
ಗದಗ: ನಗರದ ಸಮರ್ಥನಂ ಟ್ರಸ್ಟ್ ವತಿಯಿಂದ ಮಾ. 15 ರಂದು ಟ್ರಿಯಾ ಸಲೂಷಂನ್ಸ್ ಸಹಯೋಗದೊಂದಿಗೆ ಸಂಸ್ಥೆಯ ಕಟ್ಟಡದಲ್ಲಿ ಉಚಿತ ಉದ್ಯೋಗ ಮೇಳ ಏರ್ಪಡಿಸಲಾಗಿದೆ. ಎಸ್ಎಸ್ಎಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಪದವೀಧರರು ಈ ಉದ್ಯೋಗ ಮೇಳದ ಸದುಪಯೋಗ ಪಡೆದುಕೊಳ್ಳಬಹುದು. ಈ ಉದ್ಯೋಗ ಮೇಳದಲ್ಲಿ ಪ್ರತಿಷ್ಠಿತ ಎಂಎನ್ಸಿ ಕಂಪನಿಗಳಲ್ಲಿನ ಹುದ್ದೆಗಳಿಗೆ ಅವಕಾಶವಿದೆ. ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೂ ಅವಕಾಶವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಇಂದು ಮಹಾಸರಸ್ವತಿ ಪೂಜೆ
ಗದಗ: ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಮಾ. 15ರ ಮಧ್ಯಾಹ್ನ 2.25ಕ್ಕೆ ಮಹಾಸರಸ್ವತಿ ಪೂಜೆ ಹಾಗೂ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ, ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸತ್ಕಾರ ಹಾಗೂ ಶಾಲೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾದ ಜಿ.ಎಸ್. ನರಗುಂದ ಶಿಕ್ಷಕರಿಗೆ ಬೀಳ್ಕೊಡುವ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಪ್ರೌಢಶಾಲೆಯ ಚೇರಮನ್ ಐ.ಎಸ್. ಶೀಲವಂತರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ವಿಡಿಎಸ್ ಬಾಲಕರ ಪಪೂ ಕಾಲೇಜಿನ ದತ್ತಪ್ರಸನ್ನ ಪಾಟೀಲ ಆಗಮಿಸುವರು ಎಂದು ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಯು.ಎಸ್. ಧನವಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ತ್ರಿಂಶತಿ ಉತ್ಸವ
ಗದಗ: ತಾಲೂಕಿನ ಕೋಟುಮಚಗಿ ಗ್ರಾಮದ ಸೋಮೇಶ್ವರ ಪ್ರೌಢಶಾಲೆಯಲ್ಲಿ ಸಂಸ್ಥೆಯ ತ್ರಿಂಶತಿ ಉತ್ಸವ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಪಾಲಕರ ದಿನಾಚರಣೆಯನ್ನು ಮಾ. 15ರ ಬೆಳಗ್ಗೆ 10.30ಗಂಟೆಗೆ ಪ್ರೌಢಶಾಲೆಯ ಸೋಮೇಶ್ವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಾನ್ನಿಧ್ಯವನ್ನು ಬೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ವಹಿಸುವರು. ಸಮಿತಿಯ ಅಧ್ಯಕ್ಷ ಆರ್.ವಿ. ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಸೋಮೇಶ್ವರ ಸಭಾಭವನದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ ನೆರವೇರಿಸುವರು. ಸೋಮೇಶ್ವರ ಜ್ಯೋತಿ ಸ್ಮರಣ ಸಂಚಿಕೆ ಬಿಡುಗಡೆಯನ್ನು ವಿಪ ಸದಸ್ಯ ಬಸವರಾಜ ಹೊರಟ್ಟಿ ನೆರವೇರಿಸುವರು. ಸಂಸ್ಥಾಪಕ ಅಧ್ಯಕ್ಷ ದಿ. ಎಸ್.ಎಫ್. ಗಾಣಿಗೇರವರ ಭಾವಚಿತ್ರ ಅನಾವರಣವನ್ನು ಹಿರಿಯ ನ್ಯಾಯವಾಧಿ ಎಸ್.ಕೆ. ಮೇಟಿ ನೆರವೇರಿಸುವರು. ಅತಿಥಿಗಳಾಗಿ ಸಂಸದ ಪಿ.ಸಿ. ಗದ್ದಿಗೌಡ್ರ, ಸಂಸದ ಶಿವಕುಮಾರ ಉದಾಸಿ, ಮಾಜಿ ಶಾಸಕ ಸಿ.ಎಸ್. ಮುತ್ತಿನಪೆಂಡಿಮಠ, ಜಿಪಂ ಸದಸ್ಯೆ ಚಂಬವ್ವ ಪಾಟೀಲ್, ಗ್ರಾಪಂ ಅಧ್ಯಕ್ಷೆ ಸುಮಂಗಲಾ ಜಗ್ಗಲ, ಕೆಸಿಸಿ ಬ್ಯಾಂಕ್ನ ಮಾಜಿ ಅಧ್ಯಕ್ಷ ಎಸ್.ಬಿ. ಸಂಕಣ್ಣವರ, ವಿಜ್ಞಾನಿ ವಿ.ಕೆ.ಬಣಕಾರ, ರಾಜೀವ ನಾಯಕ, ಎಸ್.ಎಸ್. ಗುಡ್ಲಾನೂರ, ಡಾ. ರಾಜಶೇಖರ ಗಾಣಿಗೇರ, ರಾಘವೇಂದ್ರ ಗಾಣಿಗೇರ, ಚಂದ್ರಶೇಖರ ಮಾಳಗೊಂಡ ಉಪಸ್ಥಿತರಿರುವರು. ಸಹಾಯಕ ಅಭಿಯಂತರ ಸಿದ್ದೇಶ, ಎಂಟೆಕ್ನಲ್ಲಿ ಸ್ವರ್ಣಪದಕ ಪಡೆದ ಪ್ರಸನ್ನ ಕುಲಕರ್ಣಿ, ಅರುಣೋದಯ ಕಲಾತಂಡದ ಶಂಕ್ರಣ್ಣ ಸಂಕಣ್ಣವರ ಅವರ ಸನ್ಮಾನ ಕಾರ್ಯಕ್ರಮ ಜರುಗಲಿದೆ.
ಇಂದು ಉದ್ಘಾಟನೆ
ಗದಗ: ಹಿರಾ ವೆಲ್ಫೇರ್ ಟ್ರಸ್ಟ್ (ರಿ) ಗದುಗಿನ ಗಂಗಿಮಡಿ ರಸ್ತೆಯ 1ನೇ ಕ್ರಾಸ್ ಬಳಿ ನೂತನವಾಗಿ ನಿರ್ಮಿಸಿರುವ ಹಿರಾ ಇಸ್ಲಾಮಿಕ್ ಸೆಂಟರ್ನ ಉದ್ಘಾಟನಾ ಸಮಾರಂಭವನ್ನು ಮಾ. 15 ರಂದು ಆಯೋಜಿಸಲಾಗಿದೆ. ರಾಜ್ಯ ಜಮಾತೆ ಇಸ್ಲಾಮಿ ಹಿಂದ್ನ ರಾಜ್ಯ ಅಧ್ಯಕ್ಷ ಮೌಲಾನಾ ಮಹ್ಮದ್ ಅಬ್ದುಲ್ ಜಾವೀದ್ ಅವರು ಉದ್ಘಾಟಿಸುವರು. ಮಾಜಿ ಸಚಿವ ಎಚ್.ಕೆ. ಪಾಟೀಲ, ಶಾಸಕ ಶ್ರೀಶೈಲಪ್ಪ ಬಿದರೂರ, ತಾಜ್ ಶಮೀರ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಚೇರಮನ್ ಸರ್ಫರಾಜ ಉಮಚಗಿ ಆಗಮಿಸುವರು.