ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದಿನಿಂದ ವಿವಿಧ ಕಾರ್ಯಕ್ರಮ

Lingaraj Badiger
Updated On : 16 Mar 2013, 11:25 am

ಗದಗ:  ತಾಲೂಕಿನ ಹುಲಕೋಟಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಮಾ. 16ರಿಂದ 18ರ ವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾ. 16ರ ಬೆಳಗ್ಗೆ 10.45 ಗಂಟೆಗೆ ಗಣಪತಿ ಹೋಮ, ಪೂರ್ಣಾಹುತಿ ಕಾರ್ಯಕ್ರಮ ಜರುಗಲಿದೆ.
ರಾತ್ರಿ 8 ಗಂಟೆಗೆ ವಾಸ್ತು ಶಾಂತಿ, ಅಂಕುರಾರ್ಪಣ, ರಕ್ಷಾ ಬಂಧನ, ಯಾಗಶಾಲಾ ಪ್ರವೇಶ ಪೂಜಾ ಹೋಮ, ಪೂರ್ಣಾಹುತಿ ನಡೆಯುವುದು. ಮಾ. 17ರ ಬೆಳಗ್ಗೆ 8.30 ರಿಂದ 12ರ ವರೆಗೆ ಗಣಪತಿ ಪೂಜಾ, ಪುಣ್ಯಾಹ ವಿಶೇಷ ನಂದಿ ಯಾಗಶಾಲಾ ಪ್ರವೇಶ ಮಂಟಪಾರ್ಚನೆ ಅದಿವಾಸಗಳು, ಗೋಪುರ ಕಳಸಾರೋಹಣ, ಪೂರ್ಣಾಹುತಿ, ದೀಪಾರಾಧನೆ, ಪ್ರಸಾದ, ಸಂಜೆ 5.30 ರಿಂದ 8.30ರ ವರೆಗೆ ಗಣಪತಿ ಪೂಜಾ, ಪುಣ್ಯಾಹ ನಂದಿ ಯಾಗಶಾಲಾ ಪೂಜಾ ಹೋಮ, ಅಷ್ಟಬಂಧನ ಯಂತ್ರ ಸ್ಥಾಪನೆ, ಪೂರ್ಣಾಹುತಿ, ದೀಪಾರಾಧನೆ. ನಂತರ ಬೆಂಗಳೂರು ರಾಜ ರಾಜೇಶ್ವರಿ ನಗರದ ಕೈಲಾಸ ಆಶ್ರಮದ ಮಹಾ ಸಂಸ್ಥಾನದ ಜಯೇಂದ್ರಪುರಿ ಶ್ರೀಗಳಿಂದ ಆಶೀರ್ವಚನ. ಮಾ. 18ರ ಬೆಳಗ್ಗೆ 10.30 ಗಂಟೆಗೆ ಗಣಪತಿ ಪೂಜಾ, ಪುಣ್ಯಾಹ ಯಾಗಶಾಲಾ ಪೂಜಾ ಹೋಮ ನಾಡಿ ಸಂಧಾನ, ಸ್ಪರ್ಶಾಹುತಿ ಮಹಾ ಪೂರ್ಣಾಹುತಿ, ಯಾತ್ರಾದಾನ ಕಳಶೋಶ್ವಾಸನೆ, ಆಂಜನೇಯಸ್ವಾಮಿ ಮತ್ತು ಶಿವಾಲಯ ದೇವಸ್ಥಾನದ ಮಹಾ ಕುಂಭಾಭಿಷೇಕ ನಡೆಯುವುದು. ನಂತರ ಮೂಲಸ್ಥಾನ ದೇವರಿಗೆ ಅಭಿಷೇಕ ಅಲಂಕರಾ ದೀಪಾರಾಧನೆ ಬಳಿಕ ನೂತನ ಆಂಜನೇಯ ಸ್ವಾಮಿ ದೇವಾಲಯದ ನೂತನ ವಿಮಾನ ಗೋಪುರ ಮತ್ತು ಅಷ್ಟ ಬಂಧ ಮಹಾ ಕುಂಭಾಭಿಷೇಕವು ಬೆಂಗಳೂರು ರಾಜ ರಾಜೇಶ್ವರಿ ನಗರದ ಕೈಲಾಸ ಆಶ್ರಮದ ಮಹಾಸಂಸ್ಥಾನದ ಜಯೇಂದ್ರಪುರಿ ಶ್ರೀ ನೆರವೇರಿಸುವರೆಂದು ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿ ಡಿಬಾರ್
ಗದಗ: ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರಿನ ಎಸ್.ಕೆ. ಪಿಯು ಕಾಲೇಜಿನಲ್ಲಿ ಶುಕ್ರವಾರ ನಡೆದ ಅರ್ಥಶಾಸ್ತ್ರ ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದ ವೇಳೆ ಓರ್ವ ವಿದ್ಯಾರ್ಥಿ ಸಿಕ್ಕಿಬಿದ್ದು, ಡಿಬಾರ್ ಆದ ಘಟನೆ ಜರುಗಿದೆ. ಅಲ್ಲದೆ ರೋಣ ಪಟ್ಟಣದಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 4 ವಿದ್ಯಾರ್ಥಿಗಳು ನಕಲಿಗೆ ಬೇಕಾಗುವ ವಸ್ತು ಹೊಂದಿದ ಆರೋಪದ ಮೇಲೆ ಅವರನ್ನು ಪರೀಕ್ಷಾ ಕೇಂದ್ರದಿಂದ ಹೊರ ಹಾಕಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement