ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷರಾಗಿ ಕೆ.ಎಸ್. ಚೆಟ್ಟಿ ಆಯ್ಕೆ
ಗದಗ: ನಗರದ ಜ. ತೋಂಟದಾರ್ಯ ಮಠದ 2013ನೇ ಸಾಲಿನ ಜಾತ್ರಾಮಹೋತ್ಸವದ ಪೂರ್ವಭಾವಿ ಸಭೆಯು ಈಚೆಗೆ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ಜರುಗಿತು. ಸಭೆಯಲ್ಲಿ ಪ್ರಸಕ್ತ ಸಾಲಿನ ಜಾತ್ರಾ ಮಹೋತ್ಸವಕ್ಕೆ ಅಧ್ಯಕ್ಷರನ್ನಾಗಿ ಗದಗ-ಬೆಟಗೇರಿಯ ಚಾರ್ಟರ್ಡ್ ಅಕೌಂಟೆಂಟ್ ಕೆ.ಎಸ್. ಚೆಟ್ಟಿಯವರನ್ನು ನೇಮಕಗೊಳಿಸಲಾಯಿತು. ಉಪಾಧ್ಯಕ್ಷರನ್ನಾಗಿ ವರ್ತಕ ಶಿವಪುತ್ರಪ್ಪ ಕುಂದಗೋಳ, ವಿದ್ಯಾಧರ ದೊಡ್ಡಮನಿ, ಗಂಗಾಧರ ಹಿರೇಮಠ, ಕಾರ್ಯದರ್ಶಿಯಾಗಿ ಮುರುಘರಾಜೇಂದ್ರ ಬಡ್ನಿ, ಕಿಶನ್‌ಸಾ ಮೇಹರವಾಡೆ, ಕೋಶಾಧ್ಯಕ್ಷರಾಗಿ ಬಸವರಾಜ ರಾಮನಕೊಪ್ಪ, ಚಂದ್ರು ತಡಸದ, ಸಹಕಾರ್ಯದರ್ಶಿಯಾಗಿ ಎಸ್.ಎಸ್. ಕೊಟ್ಟೂರಶೆಟ್ಟರ್ ಅವರನ್ನು ಆಯ್ಕೆ ಮಾಡಲಾಯಿತು. ಇದಕ್ಕೂ ಮೊದಲು ಶ್ರೀಮಠದ ಕಳೆದ ವರ್ಷದ ಜಾತ್ರಾ ಸಮಿತಿ ಅಧ್ಯಕ್ಷ ಎಂ.ಎಸ್. ಪಾಟೀಲ ಹಾಗೂ ಪ್ರಭುದೇವ ಹಿರೇಮಠ ಅವರು ಜಾತ್ರಾ ಮಹೋತ್ಸವದ ಖರ್ಚು ವೆಚ್ಚದ ಲೆಕ್ಕಪತ್ರವನ್ನು ಸಭೆಗೆ ನೀಡಿದರು. ಸಾನ್ನಿಧ್ಯ ವಹಿಸಿದ್ದ ಜ. ತೋಂಟದ ಡಾ. ಸಿದ್ದಲಿಂಗ ಶ್ರೀಗಳು ಆಶೀರ್ವಚನ ನೀಡಿದರು. ಕಳೆದ ಸಾಲಿನ ಜಾತ್ರಾ ಮಹೋತ್ಸವದ ಸಮಿತಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಡಾ. ಆರ್.ಟಿ. ಕುಲಕರ್ಣಿ, ಡಾ. ಅನಂತ ಶಿವಪುರ, ಪ್ರೊ. ಎಸ್.ಟಿ. ಪಾಟೀಲ, ಕೆ.ಎಚ್. ಬೇಲೂರ, ಆರ್.ಐ. ಮುನವಳ್ಳಿ, ಮಹಾಂತಣ್ಣ ಬಡ್ನಿ, ಈಶಣ್ಣ ಮೆಹರವಾಡೆ, ಜಯದೇವ ಮೆಣಸಗಿ, ಕಾಂತಿಲಾಲ ಬನ್ಸಾಲಿ, ಶಂಕ್ರಪ್ಪ ಇಂಡಿ, ಅಮರೇಶ, ಅಂಗಡಿ, ಎಸ್.ಎಸ್. ಕಳಸಾಪುರ, ಬಸನಗೌಡ ಹಿರೇಗೌಡರ ಮುಂತಾದವರು ಉಪಸ್ಥಿತರಿದ್ದರು. ಎಂ.ಎ. ಹಂಚಿನಾಳ ಸ್ವಾಗತಿಸಿ, ನಿರೂಪಿಸಿದರು.