ಆರಾಧನಾ ಯೋಜನೆ ಚೆಕ್ ವಿತರಣೆ
ಗದಗ: ಗದಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ದೇವಸ್ಥಾನಗಳಿಗೆ ಗದಗ ಶಾಸಕ ಶ್ರೀಶೈಲಪ್ಪ ಬಿದರೂರ ಆರಾಧನಾ ಯೋಜನೆಯಡಿ ಬಿಡುಗಡೆಯಾಗಿದ್ದ ಅನುದಾನದ ಚೆಕ್ಗಳನ್ನು ಶುಕ್ರವಾರ ತಮ್ಮ ಕಚೇರಿಯಲ್ಲಿ ವಿತರಿಸಿದರು. ಶಾಸಕ ಬಿದರೂರ ಮಾತನಾಡಿ, 2010-12ನೇ ಸಾಲಿಗಾಗಿ ಗದಗ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು ರು. 7 ಲಕ್ಷ ಅನುದಾನ ಬಿಡುಗಡೆಯಾಗಿದೆ. ಪ್ರತಿ ದೇವಸ್ಥಾನಕ್ಕೆ ರು. 50 ಸಾವಿರ ನೀಡಲಾಗ್ಟಿಣ. ಗದಗ ಮದ್ಲಿ ಓಣಿಯಲ್ಲಿರುವ ಬ್ರಹ್ಮ ದೇವ, ಕರಿಯಮ್ಮನ ಕಲ್ಲ ಬಡಾವಣೆಯ ಹನುಮಂತ, ಕಬಲಾಯತಕಟ್ಟಿಯ ಈಶ್ವರ, ಮುಳಗುಂದದ ಕೋರಮ್ಮ ದೇವಿ, ನಾಗಾವಿಯ ಅಯ್ಯಪ್ಪ ಸ್ವಾಮಿ, ಹರ್ತಿಯ ಕಂಠಿ ದ್ಯಾಮವ್ವ ದೇವಿ, ಚಿಂಚಲಿ ಬೀಬಿ ಫಾತಿಮಾ, ಬೆಟಗೇರಿಯ ಬನ್ನಿ ಮಹಾಕಾಳಿ, ನೇಕಾರ ಕಾಲೋನಿ, ಗದುಗಿನ ಈಶ್ವರ, ಹುಡ್ಕೋ ಬಡಾವಣೆ, ಕುರ್ತಕೋಟಿಯ ವಿರೂಪಾಕ್ಷ, ಕಲ್ಲೂರಿನ ಚೌಡಮ್ಮದೇವಿ, ಕಣವಿ ವೀರಭದ್ರೇಶ್ವರ - ಹೀಗೆ 14 ದೇವಸ್ಥಾನಗಳಿಗೆ ಎರಡು ಕಂತುಗಳಲ್ಲಿ ಅನುದಾನ ನೀಡಲಾಗುತ್ತಿದೆ ಎಂದರು. ಸೊರಟೂರಿನ ಜುಮ್ಮಾ ಮಸೀದಿ ಹಾಗೂ ಚಿಂಚಲಿಯ ಅಂಜುಮನ್ ಇಸ್ಲಾಂ ಕಮಿಟಿಯ ಸಮುದಾಯ ಭವನಕ್ಕೂ ಅನುದಾನ ನೀಡಲಾಗಿದೆ ಎಂದರು.ಗದಗ ತಹಸೀಲ್ದಾರ ಎಸ್.ಡಿ. ಗಣಾಚಾರಿ ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.