ಕ್ರೀಡಾಂಗಣ ಸದುಪಯೋಗ ಪಡಿಸಿಕೊಳ್ಳಿ
ನರಗುಂದ: ಪಟ್ಟಣದ ಕ್ರೀಡಾಪಟುಗಳ ಬಹುದಿನದ ಕನಸು ಕ್ರೀಡಾಂಗಣವನ್ನು ಅಭಿವೃದ್ದಿಗೊಳಿಸುವುದು. ಅದು ಈಗ ಈಡೇರಲಿದ್ದು, ಇದಕ್ಕಾಗಿ ಸರ್ಕಾರ ವಿಶೇಷ ಯೋಜನೆ ರೂಪಿಸಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಅವರು ಈಚೆಗೆ ಪಟ್ಟಣದ ಸಿದ್ದೇಶ್ವರ ಕಾಲೇಜಿನ ಆವರಣದ ಸಭಾ ಭವನದಲ್ಲಿ ಕ್ರೀಡಾಂಗಣಕ್ಕೆ ಹೆಚ್ಚುವರಿ ಪೆವಿಲಿಯನ್ ಹಾಗೂ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಆರೋಗ್ಯಕ್ಕೆ ಒತ್ತು: ನನ್ನ ಮತಕ್ಷೇತ್ರದಲ್ಲಿ ಪಟ್ಟಣದಲ್ಲಿ 100 ಹಾಸಿಗೆ ಆಸ್ಪತ್ರೆ, ಶಿರೋಳ ಗ್ರಾಮದಲ್ಲಿ 1.30 ಕೋಟಿಯಲ್ಲಿ ನೂತನ ಆಸ್ಪತ್ರೆಗೆ ಭೂಮಿ ಪೂಜೆ, ರೋಣ ತಾಲೂಕಿನ ಕದಡಿ ಗ್ರಾಮದಲ್ಲಿ ರು. 1.40 ಕೋಟಿಯಲ್ಲಿ ಆರೋಗ್ಯ ಆಸ್ಪತ್ರೆ ಉದ್ಘಾಟನೆ, ಡ.ಸ.ಹಡಗಲಿ ಆರೋಗ್ಯ ಕೇಂದ್ರಕ್ಕೆ ರು. 40 ಲಕ್ಷ, ಬೆಳವಣಿಕಿ ರು. 1.10 ಕೋಟಿಯಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭಗೊಂಡಿದೆ ಎಂದರು. ರುದ್ರಯ್ಯ ಶಿರುಂದಮಠ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಸದಸ್ಯ ಎಸ್.ಬಿ. ಕರಿಗೌಡರ, ಪುರಸಭೆ ಸದಸ್ಯ ಪ್ರಕಾಶ ಪಟ್ಟಣಶಟ್ಟಿ, ವಾಸು ಜೋಗಣ್ಣವರ, ಉಮೇಛಶ ಕುಡೆನವರ, ಚಂದ್ರು ಪವಾರ, ಪ್ರಾ. ನೀಲಾಂಬಿಕಾ ಪಟ್ಟಣಶಟ್ಟಿ, ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ಬಿ.ಎಸ್. ಉಪ್ಪಾರ, ಉಮೇಶ ಯಮೋಜಿ, ಲೋಕೋಪಯೋಗಿ ಅಧಿಕಾರಿ ಎಸ್.ಎಂ. ಪಾಟೀಲ ಇದ್ದರು. ಎಸ್.ಕೆ. ಪಾಟೀಲ ಸ್ವಾಗತಿಸಿದರು. ಈಶ್ವರಯ್ಯ ಮಠಪತಿ ನಿರೂಪಿಸಿದರು.