ದಾಳಿ: ನಕಲಿ ಬಂಗಾರ ಬಿಸ್ಕೆಟ್ ವಶ
ಗದಗ: ನಗರ ಠಾಣೆಯ ಪೊಲೀಸರು ಸಿಪಿಐ ಸಂತೋಷ ಪವಾರ್ ನೇತೃತ್ವದಲ್ಲಿ ಸೋಮವಾರ ನಗರದ ಮುಳಗುಂದ ನಾಕಾದ ಬಿಳಿ ಇರುವ ಮೋಹನ್ ವಾಳ್ವೇಕರ (ಚೀಟರ್ ಮೋನ್ಯಾ) ಮನೆ ಮೇಲೆ ದಾಳಿ ನಡೆಸಿ 21 ನಕಲಿ ಹಾಗೂ 1 ಅಸಲಿ ಬಂಗಾರದ ಬಿಸ್ಕೆಟ್ಗಳನ್ನು ವಶಪಡಿಸಿಕೊಂಡಿರುವ ಘಟನೆ ಜರುಗಿದೆ. ಆರೋಪಿ ಮೋಹನ್ ವಾಳ್ವೇಕರ ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ. ಬಂಗಾರವನ್ನು ಕೊಳ್ಳಲು ಬಂದಿದ್ದ ಆಂಧ್ರ ಮೂಲದ ನಾಲ್ವರನ್ನು ತಮ್ಮ ವಶಕ್ಕೆ ಪಡೆದಿರುವ ಪೊಲೀಸರು ಅವರಿಂದ ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. ಈ ಹಿಂದೆಯೂ ಮೋಹನ್ ವಾಳ್ವೇಕರ ಅವರಿಂದ ಈ ರೀತಿಯ ಹಲವಾರು ಪ್ರಕರಣಗಳು ನಡೆದಿದ್ದು, ಅವುಗಳಲ್ಲಿ ಕೆಲವು ಇಂದಿಗೂ ತನಿಖಾ ಹಂತದಲ್ಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದಾಳಿಯ ವೇಳೆಯಲ್ಲಿ ನಕಲಿ ನೋಟುಗಳನ್ನು ತಯಾರಿಸಲು ಬೇಕಾಗುವ ವಸ್ತುಗಳು ಸಿಕ್ಕಿವೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.