ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸುದ್ದಿ ಸಂಕ್ಷೇಪ

Mainashree
Updated On : 20 Mar 2013, 10:46 am

ಇಂದು ನೀರು ಪೂರೈಕೆ
ಗದಗ:
ಇಲ್ಲಿನ ಪಂಚಾಕ್ಷರಿ ನಗರ, ಭೂಮರಡ್ಡಿ ವೃತ್ತ, ಮಹಾವೀರ ಕಾಲನಿ, ಮಹಾಕೂಟೇಶ್ವರ ಲೈನ್, ಕಾಶಿ ವಿಶ್ವನಾಥ ನಗರ, ಸಂಭಾಪುರ ರಸ್ತೆ, ಪೊಲೀಸ್ ಕ್ವಾರ್ಟರ್ಸ್, ರಾಜೀವ್ ಗಾಂಧಿ ನಗರದ ಕೆಲವು ಭಾಗಗಳಲ್ಲಿ ಬುಧವಾರ ತುಂಗಭದ್ರಾ ನದಿ ನೀರು ಪೂರೈಸಲಾಗುವುದು ಎಂದು ನಗರಸಭೆ ತಿಳಿಸಿದೆ.

ಇಬ್ಬರು ಡಿಬಾರ್...
ಗಜೇಂದ್ರಗಡ:
ಪಟ್ಟಣದ ಎಸ್.ಎಂ. ಭೂಮರಡ್ಡಿ ಪದವಿಪೂರ್ವ ಮಹಾವಿದ್ಯಾಲದಲ್ಲಿ ನಡೆಯುತ್ತಿರುವ ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷಾ ಕೊಠಡಿಗೆ ಜಿಲ್ಲಾ ಜಾಗೃತ ದಳದ ಬಿ.ಎಸ್. ಗೌಡರ ನೇತೃತ್ವದ ತಂಡ ಮಂಗಳವಾರ ಪರೀಕ್ಷೆ ನಡೆಯುವ ಸಂದರ್ಭ ದಿಢೀರ್ ಭೇಟಿ ನೀಡಿ ನಕಲು ಮಾಡುತ್ತಿದ್ದ ಇರ್ವರು ವಿದ್ಯಾರ್ಥಿನಿಯರನ್ನು ಡಿಬಾರ್ ಮಾಡಲಾಗಿದೆ ಎಂದು ಪ.ಪೂ ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.  ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನಲೆಯಲ್ಲಿ ಸ್ಥಳೀಯ ಎಸ್.ಎಂ. ಭೂಮರಡ್ಡಿ ಪದವಿಪೂರ್ವ ಮಹಾವಿದ್ಯಾಲದಲ್ಲಿ ಹಾಗೂ ಸರ್ಕಾರಿ ಪದವಿ ಪೂರ್ವ ಮಹಾ ವಿದ್ಯಾಲಯದಲ್ಲಿ ಮಂಗಳವಾರ ವಿದ್ಯಾರ್ಥಿಗಳು ಸಮಾಜಶಾಸ್ತ್ರ ಮತ್ತು ಲೆಕ್ಕಶಾಸ್ತ್ರ ಪರೀಕ್ಷೆ ಬರೆದರು. ಎಸ್.ಎಂ.ಬಿ ಕಾಲೇಜಿನಲ್ಲಿ 251 ವಿದ್ಯಾರ್ಥಿಗಳು ಸಮಾಜ ಶಾಸ್ತ್ರ ಹಾಗೂ ಲೆಕ್ಕಶಾಸ್ತ್ರ ಪರೀಕ್ಷೆ ಬರೆದರೆ, ಅದೇ ರೀತಿ ಸರ್ಕಾರಿ ಪಿಯು ಕಾಲೇಜಿನಲ್ಲಿ 403 ವಿದ್ಯಾರ್ಥಿಗಳು ಸಮಾಜ ಶಾಸ್ತ್ರ ಮತ್ತು 45 ವಿದ್ಯಾರ್ಥಿಗಳು ಲೆಕ್ಕಶಾಸ್ತ್ರ ಪರೀಕ್ಷೆ ಬರೆದರು.

ಜಿಗುಪ್ಸೆ: ವ್ಯಕ್ತಿ ಆತ್ಮಹತ್ಯೆ
ಗದಗ:
ಕುಡಿತಕ್ಕಾಗಿ ಸಾಲ ಮಾಡಿದ ವ್ಯಕ್ತಿಯೊಬ್ಬ ಜಿಗುಪ್ಸೆಗೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವನು ಗ್ರಾಮದ ನಿವಾಸಿ ಒಂಟೆಲಪ್ಪ ಹಾದಿಮನಿ (40). ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯೆಯಿಂದ ಬಾಳು ಪರಿಮಳ ಪುಷ್ಪ: ದೊಡ್ಡಗೌಡ್ರ
ಲಕ್ಷ್ಮೇಶ್ವರ:
ವಿದ್ಯೆ ಮಕ್ಕಳ ಬಾಳನ್ನು ಪರಿಮಳಯುಕ್ತ ಮಂದಾರ ಪುಷ್ಪದಂತೆ ಮಾಡುತ್ತದೆ. ಅದು ಅವರ ಬದುಕನ್ನು ಹೂವಿನಂತೆ ಅರಳಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಂತೆ ಮಾಡುತ್ತದೆ ಎಂದು ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ ಅಭಿಪ್ರಾಯ ಪಟ್ಟರು.
ಗೋಜನೂರ ಸರ್ಕಾರಿ ಪ್ರೌಢಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಅತಿಥಿಗಳಾಗಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಜೀವ ನಾಯಕ ಮಾತನಾಡಿ, ಮಾನವನು ಶಿಕ್ಷಣದಿಂದ ಮಾತ್ರ ಪರಿಪೂರ್ಣ ಜೀವನ ಸಾಗಿಸಬಲ್ಲ. ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸಬೇಕಾಗಿದೆ ಎಂದರು. ಹಾನಗಲ್ಲ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಸದಾಶಿವಪ್ಪ ಎನ್., ಕೆಎಂಎಫ್ ನಿರ್ದೇಶಕ ಎಸ್.ಪಿ. ಪಾಟೀಲ, ಉಪನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿ ಸಿ.ವಿ. ಮ್ಯಾಗೇರಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ರವಿ ಬೆಂಚಳ್ಳಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಹರಳಕ್ಕ ಕರಿಯಣ್ಣವರ, ಉಪಾಧ್ಯಕ್ಷೆ ದೇವಕ್ಕ ಯಳವತ್ತಿ, ರೋಹಿಣಿ ಜಲ್ಲಾಪುರ ಹಾಗೂ ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ರವಿ ಬೆಂಚಳ್ಳಿ ಸಂಪಾದಕತ್ವದ ಜ್ಞಾನಮಂಜರಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಶಾಲೆಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕ ಎಂ.ಡಿ. ತಳ್ಳಳ್ಳಿ ಸ್ವಾಗತಿಸಿದರು. ಸವಿತಾ ಯಾಳಗಿ ನಿರೂಪಿಸಿದರು. ಎ.ಡಿ. ಕುಲಕರ್ಣಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement