ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಉತ್ತಮ ರಸ್ತೆಗಳಿಂದ ಗ್ರಾಮಾಭಿವೃದ್ಧಿ: ಲಮಾಣಿ

Mainashree
Updated On : 21 Mar 2013, 11:54 am

ಲಕ್ಷ್ಮೇಶ್ವರ: ಗ್ರಾಮೀಣ ಭಾಗದಲ್ಲಿ ಉತ್ತಮ ರಸ್ತೆ ಹಾಗೂ ಸೇತುವೆಗಳ ನಿರ್ಮಾಣದಿಂದ ಜನರ ಬದುಕು ಸುಧಾರಣೆಯಾಗುವುದು ಎಂದು ಶಾಸಕ ರಾಮಣ್ಣ ಲಮಾಣಿ ಅಭಿಪ್ರಾಯ ಪಟ್ಟರು.
ಭಾನುವಾರ ಸಮೀಪದ ಬಟ್ಟೂರಿನ ದೊಡ್ಡ ಹಳ್ಳಕ್ಕೆ ಬಟ್ಟೂರು ಮತ್ತು ಕುಂದ್ರಳ್ಳಿ, ಶೆಟ್ಟಕೇರಿ ಗ್ರಾಮಗಳ ನಡುವೆ ನಿರ್ಮಿಸಿದ ಸೇತುವೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಐದು ವರ್ಷಗಳ ಅವಧಿಯಲ್ಲಿ ಶಿರಹಟ್ಟಿ ವಿಧಾನಸಭಾ ಮತಕ್ಷೇತ್ರದಲ್ಲಿ 8 ಮೇಲ್ಸೇತುವೆಗಳನ್ನು ನಿರ್ಮಿಸಿದ್ದೇವೆ. ಬಟ್ಟೂರಿನ ದೊಡ್ಡ ಹಳ್ಳಕ್ಕೆ ರು. 1.60 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದೆ. 40 ಬ್ಯಾರೇಜು ನಿರ್ಮಾಣ ಮಾಡಲಾಗಿದೆ. 60 ವರ್ಷಗಳಲ್ಲಿ ಆಗದೇ ಇರುವ ಅಭಿವೃದ್ಧಿ ಬಿಜೆಪಿ ಸರ್ಕಾರದ ಒಂದೇ ಅವಧಿಯಲ್ಲಿ ಆಗಿದೆ ಎಂದರು.
ತೀರಾ ಹಿಂದುಳಿದ ಕುಟುಂಬದಲ್ಲಿ ಜನಿಸಿದ ನಾನು ಜನರ ವಿಶ್ವಾಸ ಮತ್ತು ಪ್ರೀತಿಯಿಂದ ಶಾಸಕನಾಗಿದ್ದೇನೆ. ಜನರ ಆಶೀರ್ವಾದ ಇದ್ದರೆ ಮತ್ತೊಮ್ಮೆ ಆರಿಸಿ ಬರುವುದು ಖಚಿತ. ಬಟ್ಟೂರು ಗ್ರಾಪಂ ವ್ಯಾಪ್ತಿಯಲ್ಲಿ 300ಕ್ಕೂ ಹೆಚ್ಚು ಆಶ್ರಯ ಮನೆಗಳನ್ನು ನಿರ್ಮಿಸಲಾಗಿದೆ. ಗ್ರಾಮಕ್ಕೆ ಹೆಚ್ಚುವರಿಯಾಗಿ 270 ಆಶ್ರಯ ಮನೆ ಮಂಜೂರು ಮಾಡಿಸಲಾಗಿದೆ. ಗ್ರಾಮದಲ್ಲಿ ರು. 40 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿ ಮಾಡಿಸಲಾಗಿದೆ ಎಂದರು.
ಗದಗ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ ಮಾತನಾಡಿದರು. ಚೆಂಬಣ್ಣ ಬಾಳಿಕಾಯಿ, ಕಲ್ಲಪ್ಪ ಹಡಪದ, ಬಟ್ಟೂರ ಗ್ರಾಪಂ ಅಧ್ಯಕ್ಷೆ ನೀಲವ್ವ ಕಳಸದ, ಗ್ರಾಪಂ ಸದಸ್ಯೆ ಮಮತಾಜಬಿ ಸುಂಕದ, ಮಲ್ಲಿಕಾರ್ಜುನ ಹೊಳಲಾಪುರ, ಬಸಪ್ಪ ದಾನಿ, ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತರ ಎನ್.ವೈ. ಮಾಳೋದೆ, ಸಹಾಯಕ ಎಂಜಿನಿಯರ್ ವಿಜಯಕುಮಾರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement