ಪಾಟೀಲ್ ಅಭಿಮಾನಿಗಳಿಂದ ಪೂಜೆ
ನರಗುಂದ: ಪಟ್ಟಣದ ಕಸಾಬ ಓಣಿಯ ದೇವಸ್ಥಾನದಲ್ಲಿ ರೋಣ ತಾಲೂಕಿನ ಮೆಣಸಗಿ ಗ್ರಾಮದಲ್ಲಿ ನಡೆದ ಗುಂಡೇಟಿನ ಘಟನೆಯಿಂದ ಶಾಸಕ ಸಿ.ಸಿ. ಪಾಟೀಲರು ಜೀವ ಅಪಾಯದಿಂದ ಪಾರಾಗಿದ್ದು, ಅವರು ಬೇಗನೆ ಗುಣಮುಖರಾಗಲಿ ಎಂದು ಸಿ.ಸಿ.ಪಾಟೀಲ ಅಭಿಮಾನಿಗಳು ಕಸಾಬಾ ಓಣಿಯ ದುರ್ಗಾದೇವಿ ದೇವಸ್ಥಾನ ಮತ್ತು ಸಾಧು ಅಜ್ಜನ ದೇವಸ್ಥಾನದಲ್ಲಿ ಅಭಿಷೇಕ, ಪೂಜೆ, ಭಜನೆ ಮಾಡಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಶಿವಾನಂದ ಮುತ್ತವಾಡ, ಬಾಬುಗೌಡ ಪಾಟೀಲ, ಮುತ್ತನಗೌಡ ಪಾಟೀಲ, ವೀರಪಾಕ್ಷಪ್ಪ ವಡ್ಡಿಗೇರಿ, ಪ್ರಶಾಂತ ಪಲ್ಲೇದ, ಬಸು ಕಲಕೇರಿ, ಮಹಾಂತಪ್ಪ ಬಾಗಣ್ಣವರ, ಗೋವಿಂದಪ್ಪ ಗುಡದೇರಿ, ಬಸಯ್ಯ ವಸ್ತ್ರದ, ಪ್ರಭು ದೂಡಮನಿ ಮುಂತಾದವರು ಉಪಸ್ಥಿತರಿದ್ದರು.