ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪ್ರತಿಭೆ ಪ್ರದರ್ಶಿಸಿ: ನೀಲಾಂಬಿಕಾ

Mainashree
Updated On : 21 Mar 2013, 11:33 am

ನರಗುಂದ:  ಈ ಹಿಂದೆ ಮಹಿಳೆ ತನ್ನ ಪ್ರತಿಭೆ ತೋರಿಸಲು ಸಾಧ್ಯವಿರಲಿಲ್ಲ. ಆದರೆ ಇಂದು ಉತ್ತಮ ವಾತವರಣವಿದ್ದು, ಮಹಿಳೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ೤ ನೀಲಾಂಬಿಕಾ ಪಟ್ಟಣಶೆಟ್ಟಿ ಹೇಳಿದರು. ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಒಂದು ಕಾಲದಲ್ಲಿ ಮಹಿಳೆಗೆ ಎಲ್ಲ ಕ್ಷೇತ್ರಗಳಲ್ಲಿ ಭಾಗವಹಿಸಲು ಸಮಾಜದ ಕಟ್ಟುಪಾಡುಗಳಿದ್ದವು. ಹಾಗಾಗಿ ಮಹಿಳೆ ಅವಕಾಶ ವಂಚಿತಳಾಗಿದ್ದಳು. 21ನೇ ಶತಮಾನದಲ್ಲಿ ಮಹಿಳೆಗೆ ಎಲ್ಲ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವ ಸ್ವಾತಂತ್ರ್ಯವಿದೆ.  ನಮ್ಮ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಬೇಕು. ಇದರಿಂದ ಸಮಾಜ ಮತ್ತು ದೇಶಕ್ಕೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದರು. ಡಾ೤ ಸತ್ಯಭಾಮಾ ಕಾಳೆ ಮಾತನಾಡಿದರು. ಪಿಎಚ್‌ಡಿ ಪದವಿ ಪಡೆದ ಡಾ೤ ನೀಲಾಬಿಕಾ ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಎಸ್.ಕೆ. ಪಾಟೀಲ ಸ್ವಾಗತಿಸಿದರು. ಶೃತಿ ದೇಶಪಾಂಡೆ ಹಾಗೂ ಸುಧಾರಾಣಿ ಗುಜಮಾಗಡಿ ನಿರೂಪಿಸಿದರು. ನಿಷಾತ್ ಷರೀಫ್ ವಂದಿಸಿದರು.
 
ಮಹಿಳೆ-ಪುರುಷ ಭಿನ್ನತೆ ಬೇಡ: ಅನ್ನದಾನ ಶ್ರೀ
ಮುಂಡರಗಿ:
ದೇಶದ ಸಂಸ್ಕೃತಿ ಮಹಿಳೆ ಮತ್ತು ಪುರುಷರಿಬ್ಬರನ್ನೂ ಅವಲಂಬಿಸಿದೆ. ಪುರುಷ-ಮಹಿಳೆಯರಲ್ಲಿಯ ಭಿನ್ನತೆಯನ್ನು ಹೋಗಲಾಡಿಸಿಕೊಂಡು ಇಬ್ಬರೂ ಸರಿಸಮನಾಗಿ ದುಡಿದಾಗ ಮಾತ್ರ ನಮ್ಮ ಸಂಸ್ಕೃತಿ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಎಂದು ನಾಡೋಜ ಜ. ಡಾ. ಅನ್ನದಾನ ಶ್ರೀಗಳು ಹೇಳಿದರು. ಅವರು ಈಚೆಗೆ ಸ್ಥಳೀಯ ಜ. ಅನ್ನದಾನೀಶ್ವರ ಸಂಸ್ಥಾನಮಠದಲ್ಲಿ ನಡೆದ ಅಖಿಲ ಕರ್ನಾಟಕ ಮಹಿಳಾ ಜಾಗೃತಿ ವೇದಿಕೆ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳೆ ಎಂದೂ ಅಬಲೆಯಲ್ಲ. ಅವಳು ಯಾವಾಗಲೂ ಸಬಲೆ. 12ನೇ ಶತಮಾನದ ಶರಣರ ಕಾಲದಿಂದಲೂ ಮಹಿಳೆಗೆ ವಿಶೇಷ ಸ್ಥಾನಮಾನವನ್ನು ಕೊಡುತ್ತಾ ಬಂದಿರುವುದೇ ಇದಕ್ಕೆ ಸಾಕ್ಷಿ ಎಂದರು. ನಿವೃತ್ತ ಪ್ರಾಚಾರ್ಯ ಕೆ.ಎಚ್. ಬೇಲೂರ, ಅಧ್ಯಕ್ಷತೆ ವಹಿಸಿದ್ದ ಭಾಗ್ಯಲಕ್ಷ್ಮೀ ಬಿಳಿಮಗ್ಗದ ಮಾತನಾಡಿದರು. ಈ ಸಂದರ್ಭದಲ್ಲಿ ಸುಧಾ ಸಾಹುಕಾರ, ಹೇಮಾ ತಂಗೋಡ, ಲಕ್ಷ್ಮೀದೇವಿ ಮಾಗಡಿ, ಅಮರವ್ವ ಲದ್ದಿ, ಕಮಲಾಕ್ಷಮ್ಮ ಶೀರಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೀಣಾ ಪಾಟೀಲ, ಶ್ರೀದೇವಿ ತಂಗೋಡ, ಪ್ರತಿಭಾ ಹೊಸಮನಿ, ದೀಪಾ ಅಳವಂಡಿ, ಶಾರದಾ ಬೇವಿನಕಟ್ಟಿ, ಲೀಲಾ ಅಕ್ಕೂರ, ಲಕ್ಷ್ಮೀದೇವಿ ಬೆಳವಟಗಿಮಠ, ಅಕ್ಕಮಹಾದೇವಿ ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು. ಜಯಶ್ರೀ ಅಳವಂಡಿ ಪ್ರಾರ್ಥಿಸಿದರು. ವೀಣಾ ಪಾಟೀಲ ಸ್ವಾಗತಿಸಿದರು. ಎಂ.ಎ.ಜಾತಿಗೇರ, ಎ.ಎ.ದೊಡ್ಡಮನಿ ನಿರೂಪಿಸಿದರು. ಶಾರದಾ ಬೇವಿನಕಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement