ರಕ್ಕಸಗುಣ ನಾಶಮಾಡುವ ಶಿಕ್ಷಣ ಅವಶ್ಯ: ಡಾ.ಕುರಿ
ಗದಗ: ಸಮಾಜವನ್ನು ಕಾಡುತ್ತಿರುವ ರಾಕ್ಷಸೀ ಪ್ರವೃತ್ತಿ ತೊಡೆದುಹಾಕುವ ಮತ್ತು ಮಾನವೀಯ ಗುಣಗಳನ್ನು ಬಿತ್ತರಿಸುವಂತಹ ಶಿಕ್ಷಣ ಅವಶ್ಯವಾಗಿದೆ ಎಂದು ಹುಲಕೋಟಿ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಶಿವಪ್ಪ ಕುರಿ ಹೇಳಿದರು. ಹುಲಕೋಟಿ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜರುಗಿದ ವಿಶ್ವ ಮಹಿಳಾದಿನ ಮತ್ತು ಸಾಕ್ಷರತಾ ದಿನಾಚರಣೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಹುಪಾಲು ಸಾಕ್ಷರರಿಂದಲೇ ಅಪರಾಧಗಳು, ನಾಡಿಗೆ ಕುಂದು ತರುವ ಹೇಯ ಘಟನೆಗಳು ನಡೆಯುತ್ತಿರುವುದು ಅವಮಾನ ಎಂದು ವಿಷಾದ ವ್ಯಕ್ತಪಡಿಸಿದರು. ಯುವಜನತೆ ಸಾಕ್ಷರತೆಯನ್ನು ಹೊಂದುವ ಜತೆಗೆ ಮನುಷ್ಯತ್ವವನ್ನು ಅರಿತುಕೊಳ್ಳಬೇಕು ಎಂದು ಕರೆ ನೀಡಿದರು. ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಎಚ್.ಎಸ್. ಚಂದ್ರಪ್ಪ ಉಪನ್ಯಾಸ ನೀಡಿದರು. ಮಹಿಳೆಯರ ಮೇಲಾಗುತ್ತಿರುವ ಶೋಷಣೆ, ಬಲಾತ್ಕಾರಗಳಂತ ಹೇಯ ಕೃತ್ಯಗಳ ತಡೆಗಟ್ಟುವಿಕೆ ಕುರಿತು ಸಮಾಜಶಾಸ್ತ್ರ ಪ್ರಾಧ್ಯಾಪಕಿ ಪ್ರೊ.ಸವಿತಾ ಪಾಟೀಲ ಮಾತನಾಡಿದರು. ಪ್ರೊ.ರಂಜನಾ ಭಂಡಾರೆ, ವೇದಾ ಹುಡೇದ ಪ್ರಾಸ್ತಾವಿಕವಾಗಿ ಮಾತನಾಡಿದರು.ಅಧ್ಯಾಪಕ ಪ್ರೊ.ನಾಗರಾಜ ಹಾವಿನಾಳ, ಡಾ.ಮಾನಪ್ಪ ಹೊನಕಾಂಬಳೆ, ಬಿ.ವೈ. ಆಲೂರ, ಪ್ರೊ.ನವೀನ ತಿರ್ಲಾಪುರ, ಎಂ. ಶ್ವೇತಾ, ಲೀಲಾ ಹರ್ಲಾಪುರ, ಮಲ್ಲಿಕಾರ್ಜುನ ಅಂಗಡಿ, ವಸಂತಾ, ವಿಜಯಲಕ್ಷ್ಮಿ ಬೆಳ್ಳಿಕಟ್ಟಿ, ಶಾರದಾ ಜಡದೆಲಿ ಉಪಸ್ಥಿತರಿದ್ದರು. ಶೋಭಾ ಕವಡಕಿ ಪ್ರಾರ್ಥಿಸಿದರು. ವಿಜಯಲಕ್ಷ್ಮೀ ಶಾಂತಗಿರಿ ಸ್ವಾಗತಿಸಿದರು. ಸವಿತಾ ತಟ್ಟಿಮನಿ ನಿರೂಪಿಸಿದರು. ಭಾರತಿ ಯರಗುಪ್ಪಿ ವಂದಿಸಿದರು.