ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹಿರಾ ಇಸ್ಲಾಮಿಕ್ ಸೆಂಟರ್ ಉದ್ಘಾಟನೆ ಮಂದಿರ, ಮಸೀದಿಗಳಿಂದ ಶಾಂತಿ

Mainashree
Updated On : 21 Mar 2013, 11:32 am

ಕನ್ನಡಪ್ರಭ ವಾರ್ತೆ, ಗದಗ, ಮಾ. 20
ಮಂದಿರ, ಮಸೀದಿಗಳು ಜನಸಮುದಾಯಕ್ಕೆ ಶಾಂತಿ, ಸೌಹಾರ್ದತೆಯನ್ನು ಮೂಡಿಸುವ ಪ್ರತೀಕಗಳಾಗಿವೆ. ಮನುಕುಲದ ಒಳಿತನ್ನು ಬಯಸುವ ಆಧ್ಯಾತ್ಮಿಕ ಪ್ರಗತಿಗೆ ಈ ಆರಾಧನಾ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ರಾಜ್ಯ ಜಮಾತ್-ಏ- ಇಸ್ಲಾಮಿ ಹಿಂದ್‌ನ ಅಧ್ಯಕ್ಷ ಮೌಲಾನಾ ಮಹ್ಮದ ಅಬ್ದುಲ್ ಜಾವೀದ್ ಅಭಿಪ್ರಾಯ ಪಟ್ಟರು.
ಅವರು ಈಚೆಗೆ ಗದುಗಿನ ಗಂಗಿಮಡಿಯಲ್ಲಿ ಹಿರಾ ವೆಲ್ಫೇರ್ ಟ್ರಸ್ಟನ ಹಿರಾ ಇಸ್ಲಾಮಿಕ್ ಸೆಂಟರ್‌ನ್ನು ಉದ್ಘಾಟಿಸಿ ಮಾತನಾಡಿದರು. ಸರ್ವಧರ್ಮಗಳು ಮಾನವನ ಒಳಿತನ್ನು ಬಯಸಿವೆ. ಅವರವರ ಧರ್ಮ ಸಮುದಾಯಕ್ಕೆ ಅವರವರ ಆಚರಣೆ ಮತ್ತು ಪಾಲನೆ ವಿಭಿನ್ನವಾದರೂ ವಿಭಿನ್ನತೆಯಲ್ಲಿ ಏಕತೆಯನ್ನು, ಕೋಮುಸೌಹಾರ್ದವನ್ನು ಕಾಣುವ ಗುಣ ಭಾರತೀಯರದು. ಕನ್ನಡ ನಾಡಿನಲ್ಲಿ ಮಂದಿರ-ಮಸೀದಿಗಳು ಜನತೆಯಲ್ಲಿ ಜಾಗೃತಿ ಮತ್ತು ವೈಚಾರಿಕತೆಯನ್ನು ಉಂಟು ಮಾಡುವ ಕಾರ್ಯ ಮಾಡುತ್ತಿವೆ. ಹಾಗೆಯೇ ಧರ್ಮ ಗುರುಗಳೂ ಕೂಡ ಸಮಾಜದಲ್ಲಿ ಶಾಂತಿ, ನೆಮ್ಮದಿ, ಕೋಮುಸೌಹಾರ್ದತೆಯನ್ನು ಮೂಡಿಸುವಲ್ಲಿ ಉಪದೇಶ ನೀಡುತ್ತಿದ್ದಾರೆ ಎಂದರು.
ಇಲಕಲ್‌ನ ಹಿರಿಯ ಚಿಂತಕ ಮಹ್ಮದ್ ತಾಜುದ್ದೀನ್, ಗದುಗಿನ ತಾಜ್ ಶಮೀರ್ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಚೇರಮನ್ ಸರ್ಫರಾಜ ಉಮಚಗಿ, ಗದುಗಿನ ಅಡವೀಂದ್ರ ಮಠದ ಮಹೇಶ್ವರ ಶ್ರೀಗಳು, ಜಮಾತೆ ಇಸ್ಲಾಮಿ ಹಿಂದ್‌ನ ಧಾರವಾಡದ ವಿಭಾಗೀಯ ಸಂಚಾಲಕ ಮೌಲಾನ ಮಹ್ಮದ್ ಸಲೀಂ ಉಮರಿ ಹಾಗೂ ಜಮಾತ್-ಏ- ಇಸ್ಲಾಮಿ ಹಿಂದ್‌ನ ಹಾಸನ ವಿಭಾಗೀಯ ಸಂಚಾಲಕ ಮೌಲಾನಾ ನಿಯಾಕ್‌ಹತ್ ಮುಲ್ಲಾ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ. ಪ್ಯಾರಅಲಿ ನೂರಾನಿ, ಗದಗ ಜಿಲ್ಲಾ ರೆಡ್‌ಕ್ರಾಸ್ ಗೌರವ ಕಾರ್ಯದರ್ಶಿ ಡಾ. ರಾಜೇಂದ್ರ ಗೊಡಬೋಲೆ, ನಗರಸಭೆಯ ಸದಸ್ಯ ಎಂ.ಸಿ.ಶೇಖ, ಬರಕತಅಲಿ ಮುಲ್ಲಾ, ಗುರುರಾಜ ತಿರ್ಲಾಪುರ, ಹುಮಾಯೂನ್ ಮಾಗಡಿ, ತೈಜಾದ ಅಹ್ಮದ ಶಿರಹಟ್ಟಿ, ಡಾ. ಅಬ್ದುಲ್ ಸುಕೂರ್ ಮುಂತಾದವರು ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕ ಜನಾಬ ಕೆ.ಐ.ಶೇಖ ಸ್ವಾಗತಿಸಿದರು. ಎ.ಎಸ್.ಖವಾಸ ನಿರೂಪಿಸಿದರು. ಡಾ.ಎಂ.ಎಸ್.ಮಕಾನದಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement