25ರಂದು ಅರಿವು ಕಾರ್ಯಕ್ರಮ
ಗದಗ: ಜಿಲ್ಲಾ ಮಟ್ಟದಲ್ಲಿ ಎನ್ಜಿಓಗಳಿಗಾಗಿ ಪಿಸಿ ಮತ್ತು ಪಿಎನ್ಡಿಟಿ ನಿಷೇಧ ಕಾಯ್ದೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಾ. 25ರ ಬೆಳಗ್ಗೆ 11 ಗಂಟೆಗೆ ಜಿಲ್ಲಾಡಳಿತ ಭವನ ರೂಂ 122ರಲ್ಲಿ ಹಮ್ಮಿಕೊಳ್ಳಲಾಗಿದೆ. ಎನ್ಜಿಓ ಸದಸ್ಯರು, ಪತ್ರಿಕಾ ಪ್ರತಿನಿಧಿಗಳು, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಭಾಗವಹಿಸಲಿದ್ದಾರೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.