ಇಂದು ಎನ್ನೆಸ್ಸೆಸ್ ಶಿಬಿರ ಉದ್ಘಾಟನೆ
ಗದಗ: ತಾಲೂಕಿನ ಬಿಂಕದಕಟ್ಟಿಯಲ್ಲಿ ಹುಲಕೋಟಿ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ, ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭ ಮಾ. 23ರ ಶನಿವಾರ ಸಂಜೆ 6 ಗಂಟೆಗೆ ಜರುಗಲಿದೆ. ಗದುಗಿನ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ರವಿ ಮೂಲಮನಿ ಉದ್ಘಾಟಿಸುವರು. ಕಾಲೇಜಿನ ಪ್ರಾಚಾರ್ಯ ಡಾ.ಶಿವಪ್ಪ ಕುರಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಗ್ರಾಪಂ ಅಧ್ಯಕ್ಷೆ ಫಾತಿಮಾ ಸೋನೆಖಾನೆ, ಉಪಾಧ್ಯಕ್ಷೆ ಸುಂದ್ರವ್ವ ಬೇವಿನಕಟ್ಟಿ, ಸದಸ್ಯ ಕೃಷ್ಣರಡ್ಡಿ ನಡವಿನಮನಿ, ವರದರೆಡ್ಡಿ ರಂಗಪ್ಪನವರ, ರೇಣುಕಾ ಅಗಸನಕೊಪ್ಪ, ಶೇಖವ್ವ ನಾನಾಪುರ, ಪಕೀರರಡ್ಡಿ ಮಕಾಳಿ ಹಾಗೂ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಎಚ್.ಎಸ್. ಚಂದ್ರಪ್ಪ ಉಪಸ್ಥಿತರಿರುವರು. ಶಿಬಿರ ಮಾ. 23ರಿಂದ 29ರ ವರೆಗೆ ನಡೆಯಲಿದೆ ಎಂದು ಎನ್ನೆಸ್ಸೆಸ್ ಸಂಯೋಜನಾಧಿಕಾರಿ ನಾಗರಾಜ ಹಾವಿನಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.