ಇಂದು ಕಸಾಪ ಸಾಹಿತ್ಯ ಸಂಜೆ
ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಇಲ್ಲಿನ ತಾಪಂ ಆವರಣದಲ್ಲಿ ಮಾ. 23ರ ಸಂಜೆ 6 ಗಂಟೆಗೆ 'ಶನಿವಾರ ಸಾಹಿತ್ಯ ಸಂಜೆ' ಕಾರ್ಯಕ್ರಮ ಜರುಗಲಿದೆ.
ಗದಗನ ಪಿಪಿಜಿ ಕಲಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ರಾಜಶೇಖರ ದಾನರಡ್ಡಿ 'ರನ್ನನ ಗದಾಯುದ್ಧ' ಕಾವ್ಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಾಹಿತಿ ಕೆ.ಎಸ್.ಎಸ್. ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಮಲ್ಲಣ್ಣ ರಾಟಿ ಕಾವ್ಯವಾಚನ ಮಾಡಲಿದ್ದಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಚಾಲಕ ಮಲ್ಲೇಶ ಡಿ.ಚ್.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.