ಜಕ್ಕಲಿ ಗ್ರಾಮದಲ್ಲಿ ಯೋಧನ ಅಂತ್ಯಕ್ರಿಯೆ
ಕ.ಪ್ರ.ವಾರ್ತೆ ನರೇಗಲ್ಲ ಮಾ. 22
ರಜೆ ಮುಗಿಸಿ ಮರಳಿ ಸೇವೆಗೆ ತೆರಳುವ ಮಾರ್ಗ ಮಧ್ಯೆ ಮಾ. 17ರಂದು ನಿಧನರಾದ ಶ್ರೀನಗರದ ಲೇಥಪುರ 110ನೇ ಬಟಾಲಿಯನ್ನಲ್ಲಿ ಸೇವೆ ಸಲ್ಲಿಸುತ್ತಿದ್ದ ಜಕ್ಕಲಿ ಗ್ರಾಮದ ಸಿಆರ್ಪಿಎಫ್ ಯೋಧ ಮುತ್ತಪ್ಪ ಯಲ್ಲಪ್ಪ ತಳವಾರ ಅವರ ಅಂತ್ಯಕ್ರಿಯೆ ಶುಕ್ರವಾರ ಜಕ್ಕಲಿ ಗ್ರಾಮದಲ್ಲಿ ಶೋಕ ಸಾಗರದ ಮಧ್ಯೆ ಜರುಗಿತು.
ಕಳೆದ 10 ವರ್ಷಗಳಿಂದ ಮುತ್ತಪ್ಪ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ತಿಂಗಳ ರಜೆಯ ಮೇಲೆ ಸ್ವಗ್ರಾಮ ಜಕ್ಕಲಿಗೆ ಬಂದಿದ್ದರು. ಮರಳಿ ಸೇವೆಗೆ ಹಾಜರಾಗಲು ತೆರಳುವಾಗ ಮಧ್ಯಪ್ರದೇಶದ ಇಟಾರ್ಚಿಯ ಹತ್ತಿರ ತೀವ್ರ ಅನಾರೋಗ್ಯದಿಂದ ಮೃತರಾದರು.
ಮೃತರ ಕಳೇಬರವನ್ನು ಶುಕ್ರವಾರ ಬೆಳಗ್ಗೆ ಸಿಆರ್ಪಿಎಫ್ ಹಿರಿಯ ಅಧಿಕಾರಿಗಳು ಹಾಗೂ ಸೇನೆಯ ಸಿಬ್ಬಂದಿ ಯೋಧನ ಹುಟ್ಟೂರಿಗೆ ತಂದಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.