ಪಾಲಕರ ಪಾತ್ರ ಪ್ರಮುಖ: ಶಿಕ್ಷಕ ಲಮಾಣಿ
ಶಿರಹಟ್ಟಿ: ದೇಶದ ಯಾವೊಬ್ಬ ಪ್ರಜೆಯೂ ಶಿಕ್ಷಣದಿಂದ ವಂಚಿತರಾಗಬಾರದೆಂಬ ಸದುದ್ದೇಶದಿಂದ ಸರ್ಕಾರಗಳು ಶಿಕ್ಷಣ ಕ್ಷೇತ್ರದಲ್ಲಿ ಹತ್ತು ಹಲವು ಯೋಜನೆಗಳನ್ನು ರೂಪಿಸಿವೆ. ಯೋಜನೆಗಳು ಸಫಲವಾಗಬೇಕಾದರೆ ಪಾಲಕರ ಪಾತ್ರ ಮಹತ್ವದ್ದಾಗಿದೆ ಎಂದು ಶಿಕ್ಷಕ ಎಂ.ಕೆ. ಲಮಾಣಿ ಹೇಳಿದರು. ಈಚೆಗೆ ಅವರು ಪಟ್ಟಣದ ಸ್ವಾಮಿ ವಿವೇಕಾನಂದ ಪೂರ್ವ ಪ್ರಾಥಮಿಕ ಮತ್ತು ನವೋದಯ ತರಬೇತಿ ಕೇಂದ್ರದ ಅಡಿಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದರು. ಮಕ್ಕಳು ಉತ್ತಮ ಶಿಕ್ಷಣ ಪಡೆದು ಅವರ ಉಜ್ವಲ ಭವಿಷ್ಯ ನಿರ್ಮಾಣವಾಗಬೇಕಾದರೆ ಪಾಲಕರು ಮೇಲಿಂದ ಮೇಲೆ ಶಾಲೆಗಳಿಗೆ ಭೇಟಿ ನೀಡಿ ತಮ್ಮ ಮಕ್ಕಳ ಶಿಕ್ಷಣದ ಮೇಲೆ ನಿಗಾವಹಿಸುವುದು ಅಗತ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಕಾಶ ನರಗುಂದ ಮಾತನಾಡಿದರು. ಸಂಸ್ಥೆಯ ಮುಖ್ಯಸ್ಥ ಶಿವಪ್ರಕಾಶ ಕಲ್ಲೂರ, ವಿಶಾಲಾಕ್ಷಿ ದೇಶಪಾಂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಡಂಬಳ, ಎಚ್.ಎಂ. ದೇವಗಿರಿ, ಎನ್.ಎಸ್.ಬಂಕಾಪುರ, ಎನ್.ಆರ್. ಕಾರಬೂದಿ, ಈರಣ್ಣ ಬಾರಬಾರ, ಬಸಮ್ಮ ಕುಸ್ಲಾಪುರ, ಮಂಜುನಾಥ ಅಂಗಡಿ, ನಂದಾ ಪಲ್ಲೇದ, ನೀಲಾವತಿ ಚವ್ಹಾಣ, ಅರುಣ ಬೇಂದ್ರೆ, ಯಶೋದಾ ಬೇಂದ್ರೆ, ನಾಗಮ್ಮ ಬಾರಬಾರ, ನೀಲಮ್ಮ ನಾರ್ಶಿ, ಸರೋಜ ಕಪ್ಪತ್ತನವರ, ಬಿಬಕ್ಕ ಕಳಸಣ್ಣವರ, ವಿಶಾಲಾಕ್ಷಿ ಕಲ್ಲೂರ ಉಪಸ್ಥಿತರಿದ್ದರು. ರವಿ ಬೇಂದ್ರೆ ಸ್ವಾಗತಿಸಿ, ನಿರೂಪಿಸಿದರು. ಶಿವಾನಂದ ಮಾಗಡಿ ವಂದಿಸಿದರು.