ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವೈಭವದ ಶರಣ ಸಂಸ್ಕೃತಿ ಮಹಾಯಾತ್ರೆ

Mainashree
Updated On : 23 Mar 2013, 10:59 am

ಗದಗ: ನಗರದಲ್ಲಿ ಶುಕ್ರವಾರ ಬೆಳಗ್ಗೆ ಜ. ತೋಂಟದಾರ್ಯ ಮಠದ ಆವರಣದಿಂದ ನಡೆದ ಶರಣ ಸಂಸ್ಕೃತಿ ಮಹಾಯಾತ್ರೆಗೆ ತ್ರಿವಿಧ ದಾಸೋಹಿ ಜ. ತೋಂಟದ ಸಿದ್ಧಲಿಂಗ ಶ್ರೀಗಳು ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.
ಮೆರವಣಿಗೆ ವೈಭವದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಭವ್ಯವಾಗಿ ನಡೆಯಿತು. ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ಶಾರದಾ ಜತ್ತಿ, ಜಗನ್ನಾಥಪ್ಪ ಫನಸಾಲೆ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಸ್.ಬಿ. ಸಂಕಣ್ಣವರ, ಕಾರ್ಯದರ್ಶಿ ಎಸ್.ವಿ. ಮೆಣಸಿನಕಾಯಿ, ತಾಲೂಕಾಧ್ಯಕ್ಷ ಅಂಗಡಿ, ಶರಣಸಾಹಿತ್ಯ ಪರಿಷತ್ ಅಧ್ಯಕ್ಷ ಅ.ಓಂ. ಪಾಟೀಲ, ತಾಲೂಕಾಧ್ಯಕ್ಷ ಪ್ರಕಾಶ ಅಸುಂಡಿ, ಪ್ರೊ. ಕೆ.ಎಚ್. ಬೇಲೂರ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಅಮರೇಶ ಅಂಗಡಿ, ಕಾರ್ಯದರ್ಶಿ ಶೇಖಣ್ಣ ಕವಳಿಕಾಯಿ, ಪಂಚಮಸಾಲಿ, ಬಣಜಿಗರ ಸಂಘ, ಬಸವದಳ, ಬಸವಕೇಂದ್ರ, ಡಿ.ಎಸ್.ಎಸ್. ಮುಂತಾದ ಸಂಘಟನೆ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು. ಅಖಿಲ ಭಾರತ ವೀರಶೈವ ಮಹಾಸಭಾ, ಲಿಂಗಾಯತ ಪ್ರಗತಿಶೀಲ ಸಂಘ, ಬಸವಕೇಂದ್ರ, ಬಸವದಳ, ಜಿಲ್ಲಾ ದಲಿತ ಸಂಘರ್ಷ ಸಮಿತಿ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಿದೇವ, ಹಡಪದ ಅಪ್ಪಣ್ಣ, ಮೇದಾರ ಕೇತಯ್ಯ, ನೂಲಿ ಚೆಂದಯ್ಯ, ಜೇಡರದಾಸಿಮಯ್ಯ, ಕುರುಬ ಗೊಲ್ಲಾಳೇಶ, ಒಕ್ಕಲಿಗ ಮುದ್ದಣ್ಣ, ಕುಂಬಾರ ಗುಂಡಯ್ಯ, ಸಿದ್ಧರಾಮೇಶ್ವರ ಭೋವಿ ಸಮಾಜ, ಗಾಣದ ಕಣ್ಣಪ್ಪ, ಲಿಂಗವಂತ ನೌಕರ ಸಂಘ, ಶಿವಸಿಂಪಿ ಸಮಾಜ, ಬಣಗಾರ, ಬಣಜಿಗರ ಸಮಾಜ, ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್, ಯಳಂದೂರ ಬಸವಲಿಂಗ ಯೋಗ ಪಾಠಶಾಲೆ, ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರ, ಅಕ್ಕನಬಳಗ ಸೇರಿದಂತೆ ಸರ್ವ ಸಮಾಜದ ಬಸವಾಭಿಮಾನಿಗಳು, ಪ್ರಗತಿಪರ ಚಿಂತಕರು, ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement