ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಮರೇಶ್ವರ ಮಹಾತ್ಮೆ ಚಿತ್ರ ಶೀಘ್ರ ಬಿಡುಗಡೆ: ಮುಳಗುಂದ

Mainashree
Updated On : 24 Mar 2013, 11:21 am

ಗದಗ: ಪರಮೇಶ್ವರನು ಬಾಲಕನಾಗಿ ಧರೆಗವತರಿಸಿ, ಲೋಕೋದ್ಧಾರ ಮಾಡಿದ ಗುರುಗುಂಟಾ ಅಮರೇಶ್ವರನ ಜೀವನ ಚರಿತ್ರೆಯನ್ನಾಧರಿಸಿದ ಭಕ್ತಿ ಪ್ರಧಾನ ಅದ್ಧೂರಿ ಪೌರಾಣಿಕ ಚಿತ್ರ, ದಾಕ್ಷಾಯಣಿ ಮೂವಿ ಮೇಕರ್ಸ್ ಅವರ ಲಿಂಗಸುಗೂರಿನ ಬಸವರಾಜ ಹಿರೇಮಠ ನಿರ್ಮಿಸುತ್ತಿರುವ 'ಅಮರೇಶ್ವರ ಮಹಾತ್ಮೆ' ಚಿತ್ರ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ಚಲನಚಿತ್ರದ ನಿರ್ದೇಶಕ ಅರವಿಂದ ಮುಳಗುಂದ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅವರು, ಇದು 2 ಸಾವಿರ ವರ್ಷಗಳ ಹಿಂದಿನ ಕಥೆ. ಈ ಚಿತ್ರ ತಾಂತ್ರಿಕವಾಗಿ, ಅದ್ದೂರಿಯಾಗಿ ಮೂಡಿ ಬಂದಿದ್ದು, ಶೀಘ್ರದಲ್ಲಿ ತೆರೆಗೆ ಬರಲಿದೆ. ಸಮರಸಿಂಹ ಅಭಿಜಿತ್ ಪ್ರಧಾನ ಪಾತ್ರದಲ್ಲಿದ್ದು, ಕೊಡಗು ಮೂಲದ ಉಜ್ವಲಾ ಎಂಬ ಹೊಸ ನಾಯಕಿಯನ್ನು ಪರಿಚಯಿಸಲಾಗಿದೆ. ಮಾಸ್ಟರ್ ಶ್ರೀನಿವಾಸ್ ಅಮರೇಶ್ವರನಾಗಿ ಅಭಿನಯಿಸಿದ್ದಾನೆ. ಚಲನಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ದೊಡ್ಡಬಸಪ್ಪ (ಶಿವಶಕ್ತಿ), ಛಾಯಾಗ್ರಹಣ ಮಹಾಬಲೇಶ, ಸಾಹಸ ಥ್ರಿಲ್ಲರ್ ಮಂಜು, ಕಲೆ ರಮೇಶ ದೇಸಾಯಿ, ನೃತ್ಯ ನಿರ್ದೇಶನ ಮದನ ಹರಿಣಿ, ಸಹ ನಿರ್ದೇಶನ ಹಲಗೂರ ವೆಂಕಟೇಶ, ಡಾ.ಪ್ರಭು ಗಂಜಿಹಾಳ, ಸಾಹಿತ್ಯ ಶಿವು ಬೇರ್ಗಿ, ಸಂಭಾಷಣೆ ಮಹೇಶ ಮನ್ನಾಪುರ, ಸಂಗೀತ ಎಂ.ಎನ್. ಕೃಪಾಕರ, ಎಂ.ಎಸ್. ಮಾರುತಿ, ಗ್ರಾಫಿಕ್ಸ್ ಅಂಥೋನಿ ಅವರದ್ದಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆ ರಾಜ್ಯ ಕಾರ್ಯದರ್ಶಿ ಎನ್.ಕೆ. ಕೊರ್ಲಹಳ್ಳಿ, ಎಂ.ಆರ್. ನದಾಫ, ಬಿಎಸ್ಸಾರ್ ಪಕ್ಷದ ಸಯ್ಯದ ಖಾಲೀದ ಕೊಪ್ಪಳ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement