ಇಂದು ತಾಂತ್ರಿಕ ವಸ್ತು ಪ್ರದರ್ಶನ ಸಮಾರೋಪ
ಲಕ್ಷ್ಮೇಶ್ವರ: ಪಟ್ಟಣದ ಬಿ.ಸಿ.ಎನ್. ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಮೂರು ದಿನ ನಡೆದ 'ನೀವೇ ಮಾಡಿ ನೋಡಿ' ಎನ್ನುವ ರಾಜ್ಯ ಮಟ್ಟದ ತಾಂತ್ರಿಕ ವಸ್ತುಗಳ ಪ್ರದರ್ಶನ ಭಾನುವಾರ ಸಂಜೆ 4 ಗಂಟೆಗೆ ಸಮಾರೋಪಗೊಳ್ಳಲಿದೆ. ಸಂಸದ ಶಿವಕುಮಾರ ಉದಾಸಿ, ಸಂಸ್ಥೆಯ ಅಧ್ಯಕ್ಷ ಬಸವರಾಜ ನೆಲವಿಗಿ, ಶಾಸಕ ರಾಮಣ್ಣ ಲಮಾಣಿ, ವಿಪ ಸದಸ್ಯ ಶಿವರಾಜ ಸಜ್ಜನ, ವಾಕರಸಾ ಸಂಸ್ಥೆಯ ಅಧ್ಯಕ್ಷ ಎಂ.ಎಸ್. ಕರಿಗೌಡರ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಜಿ.ಎಂ. ಮಹಾಂತಶೆಟ್ಟರ, ಎಸ್.ಎನ್. ಪಾಟೀಲ ಆಗಮಿಸುವರು. ತಾಂತ್ರಿಕ ಶಿಕ್ಷಣ ನಿರ್ದೇಶನಾಲಯದ ಎಚ್.ಯು. ತಳವಾರ, ತಾಂತ್ರಿಕ ಶಿಕ್ಷಣದ ಜಂಟಿ ನಿರ್ದೇಶಕ ಆನಂದ ಪೂಜಾರಿ, ಎ.ಎಂ. ಬೋಜೆದಾರ, ಸಿ. ಕಮಲಾಕ್ಷಿ, ಆರ್. ಮಂಜುನಾಥ ಆಗಮಿಸುವರು ಎಂದು ಪ್ರಾಶುಂಪಾಲ ವೈ.ಬಿ. ಗೊಡ್ಡೆಮ್ಮಿಯವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸ್‌ನಿಂದ ಬಿದ್ದು ಪ್ರಯಾಣಿಕ ಸಾವು
ಗದಗ: ವೇಗವಾಗಿ ಚಲಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್‌ನ ಚಾಲಕ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಬಸ್‌ನ ಬಾಗಿಲ ಬಳಿ ನಿಂತುಕೊಂಡಿದ್ದ ಪ್ರಯಾಣಿಕನೋರ್ವ ಬಾಗಿಲಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ಪಾಲಾಬದಾಮಿ ರಸ್ತೆಯ ಗದ್ದಿಹಳ್ಳದ ಸಮೀಪ ನಡೆದಿದೆ.
ಮೃತನನ್ನು ಬಸವರಾಜ ರೋಣದ (24) ಎಂದು ಗುರುತಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಸಂಸ್ಥೆಯ ಚಾಲಕ ಹಾಗೂ ಬಾಗಿಲು ಹಾಕದೇ ಕಾರ್ಯನಿರ್ವಹಿಸುವಲ್ಲಿ ನಿಷ್ಕಾಳಜಿ ತೋರಿದ ನಿರ್ವಾಹಕನ ಮೇಲೆ ಗದಗ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
8 ಜನ ಕಳ್ಳರ ಬಂಧನ
ಗದಗ: ವಾಹನಗಳಲ್ಲಿ ಕಬ್ಬಿಣ ಸೆಂಟ್ರಿಂಗ್ ಪ್ಲೇಟ್‌ಗಳನ್ನು ಕಳ್ಳತನದಿಂದ ಸಾಗಿಸುತ್ತಿದ್ದ 8 ಜನ ಕುಖ್ಯಾತ ಕಳ್ಳರನ್ನು ನಗರದ ಬಡಾವಣೆಯ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ, ರು. 6 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡ ಘಟನೆ ನಗರದ ಸಿ.ಬಿ. ಭೂಮರಡ್ಡಿ ವಕಾರದ ಹತ್ತಿರ ನಡೆದಿದೆ.
ಗದಗ ತಾಲೂಕಿನ ದುಂದೂರ ಗ್ರಾಮದ ನಿವಾಸಿಗಳಾದ ಪೀರಸಾಬ್ ನದಾಫ, ಲಕ್ಷ್ಮಣ ಬಡಿಗೇರ, ಮುತ್ತಪ್ಪ ಸೈದಾಪುರ, ಸಂತೋಷ ಗಳಗನಾಥ ನಾಗರಾಜ ಓಲೇಕಾರ, ಮಂಜುನಾಥ ಓಲೇಕಾರ, ಪಕೀರಸಾಬ ನದಾಫ, ರಾಜಾಸಾಬ ನದಾಫ ಎಂಬುವವರು 2 ಟಂಟಂ, 1 ಟಾಟಾಏಸ್‌ನಲ್ಲಿ 83 ಸೆಂಟ್ರಿಂಗ್ ಪ್ಲೇಟ್‌ಗಳನ್ನು ಸಾಗಿಸುತ್ತಿದ್ದ ವೇಳೆಯಲ್ಲಿ ಬಂಧಿಸಲಾಗಿದೆ.
ಈ ಸಂದರ್ಭದಲ್ಲಿ ಗದಗ ಬಡಾವಣೆಯ ಸಿಪಿಐ ಆರ್.ಎಸ್. ಬೆಂತೂರ, ಪಿಎಸ್‌ಐ ಆರ್.ಎಫ್. ದೇಸಾಯಿ, ಎಎಸ್‌ಐ ಎಸ್.ಎಸ್. ವಡ್ಡಟ್ಟಿ, ರಿತ್ತಿ, ಎಸ್.ಡಿ. ಮಣಕವಾಡ, ಎಂ.ವಿ. ಹೂಲಿಹಳ್ಳಿ, ಡಿ.ಡಿ. ಮೇಸ್ತಿ, ಮಸೂತಿ ಮುಂತಾದವರು ಹಾಜರಿದ್ದರು.