ಪರಿಸರ ಸಂರಕ್ಷಣೆಗೆ ಮುಂದಾಗಿ: ರಾಠೋಡ
ಗಜೇಂದ್ರಗಡ: ಸ್ವಾರ್ಥಕ್ಕಾಗಿ ನಿಸರ್ಗ ಸಂಪತ್ತನ್ನು ನಾಶಪಡಿಸುವ ಜತೆಗೆ ನಾವು ಕೂಡ ವಿನಾಶದ ಅಂಚಿಗೆ ತಲುಪಿದ್ದೇವೆ. ಇನ್ನಾದರೂ ಪರಿಸರ ಸಂರಕ್ಷಿಸಿ ಹಸಿರು ಸಂಪತ್ತು ಉಳಿಸುವಲ್ಲಿ ಮುಂದಾಗಬೇಕು ಎಂದು ತುಳಸಿರಾಮ ರಾಠೋಡ ಹೇಳಿದರು. ಈಚೆಗೆ ಅವರು ಸ್ಥಳೀಯ ಸಿದ್ದಾರೂಢ ಮಠದಲ್ಲಿ ಕರ್ನಾಟಕ ಜನಪರ ಸೇವಾ ಸಮಿತಿ ವತಿಯಿಂದ ಪರಿಸರ ಉಳಿವಿನ ಕುರಿತು ನಡೆದ ಚಿಂತನ ಮಂಥನ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಶಿಕ್ಷಕ ಎಚ್.ಎಸ್. ಜೋಗಣ್ಣವರ ಮಾತನಾಡಿದರು. ಸಮಿತಿ ಅಧ್ಯಕ್ಷ ಗಣೇಶ ಗುಗ್ಗಲೋತ್ತರ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಬಿ.ಕೆ. ಮಾದಿ, ವಿ.ಸಿ. ಸವಣೂರ, ಎಚ್.ಎಂ. ಹಿರೇಹಾಳ, ಶಿಕ್ಷಕ ಮಂಜುನಾಥ ಮಾದಿ, ಐ.ಎಂ. ಗೋಗೇರಿ, ಶ್ರೀಕಾಂತ ಬಾವಿಕಟ್ಟಿ, ನಂದಾ ಮನ್ನೆರಾಳ, ಚಂದ್ರವ್ವ ರಾಠೋಡ, ಅಶಾ ಓಲಿ, ಬಿಬಿಜಾನ ಮುಜಾವರ, ಮಹಮ್ಮದಗೌಸ ಮುಲ್ಲಾ ಇದ್ದರು.