ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬೀದಿ ಕಾಮಣ್ಣನಿಗೆ ಧರ್ಮದೇಟು

Mainashree
Updated On : 24 Mar 2013, 11:16 am

ರೋಣ: ತಾಲೂಕಿನ ಜಿಗಳೂರ ಗ್ರಾಮದ ಮಹಿಳೆಯೊಬ್ಬಳನ್ನು ಚುಡಾಯಿಸಿ ಕೀಟಲೆ ಮಾಡುತ್ತಿದ್ದ ಬೀದಿ ಕಾಮಣ್ಣನಿಗೆ ಸಾರ್ವಜನಿಕರು ಪಟ್ಟಣದ ಸೂಡಿ ಕ್ರಾಸ್ ಬಳಿ ಶನಿವಾರ ಸಂಜೆ ಧರ್ಮದೇಟು ನೀಡಿದ್ದಾರೆ. ಗರ್ಭಿಣಿಯಾಗಿರುವ ತನ್ನ ಸೋದರಿಯನ್ನು ಚಿಕಿತ್ಸೆಗೆ ಕರೆತಂದು ಜಿಗಳೂರು ಗ್ರಾಮಕ್ಕೆ ಮರಳಲು ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯನ್ನು ಯುವಕನೊಬ್ಬ ತದೇಕಚಿತ್ತದಿಂದ ನೋಡುತ್ತಿದ್ದ. ಇವನಿಂದ ತಪ್ಪಿಸಿಕೊಳ್ಳಲು ಮಹಿಳೆಯರು ಬೇರೆ ಕಡೆ ಹೋದರೂ ಹಿಂಬಾಲಿಸಿದ. ಖಾಸಗಿ ವಾಹನ ನಿಲುಗಡೆ ಸ್ಥಳವಾದ ಸೂಡಿ ಕ್ರಾಸ್ ಬಳಿ ಹೋದರೂ ಬೆನ್ನತ್ತಿ ಬಂದಿದ್ದಾನೆ. ಅವರೊಂದಿಗೆ ಅಶ್ಲೀಲವಾಗಿ ನಡೆದುಕೊಂಡು, ಕಿರಿಕಿರಿ ಮಾಡಿದ್ದಾನೆ. ಇದನ್ನು ಸ್ಥಳದಲ್ಲಿದ್ದವರಿಗೆ ತಿಳಿಸಿದ್ದಾಳೆ. ಅಲ್ಲಿಂದ ಓಡಿಹೋಗಲು ಯತ್ನಿಸಿದ ಯುವಕನನ್ನು ಹಿಡಿದು ಸಾರ್ವಜನಿಕರು ಥಳಿಸಿದ್ದಾರೆ.
ಚಪ್ಪಲಿ ಸೇವೆ: ಆತನ ಚೇಷ್ಟೆ ಮುಂದುವರಿದಾಗ ರೊಚ್ಚಿಗೆದ್ದ ಚಪ್ಪಲಿ ಕೈಗೆ ತೆಗೆದುಕೊಂಡು ಮನಬಂದಂತೆ ಹೊಡೆದಿದ್ದಾಳೆ. ಗುಂಪು ಸೇರಿದ ಜನರೂ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಿಚಾರಿಸಿದಾಗ, ನಾನು ಗುಲ್ಬರ್ಗ ಹತ್ತಿರದ ಹಳ್ಳಿಯವನು. ಲಾರಿ ಕ್ಲೀನರ್ ಕೆಲಸಕ್ಕೆ ಹುಬ್ಬಳಿಗೆ ಹೋಗಿದ್ದೆ. ಗುಲ್ಬರ್ಗಾಕ್ಕೆ ಹೋಗಲು ಲಾರಿ ಬರುವುದನ್ನು ಕಾಯುತ್ತಿದ್ದೇನೆ. ನಾನು ಏನೂ ತಪ್ಪುಮಾಡಿಲ್ಲ. ಕಾಲು ಮುಗಿದು ಕೇಳುತ್ತೇನೆ, ಬಿಟ್ಟು ಬಿಡಿ ಎಂದು ನುಣುಚಿಕೊಳ್ಳಲು ಯತ್ನಿಸಿದರೂ ಜನ ಬಿಡಲಿಲ್ಲ. ಕೊನೆಗೆ ಪೊಲೀಸರಿಗೆ ಒಪ್ಪಿಸುವುದೆಂದು ನಿರ್ಧರಿಸಲಾಯಿತು. ಅಷ್ಟರಲ್ಲಿ ಆತ ಜನರಿಂದ ತಪ್ಪಿಸಿಕೊಂಡು ಪಲಾಯನ ಮಾಡಿದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement