ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮೌಲ್ಯಾಧಾರಿತ ಶಿಕ್ಷಣ ಅವಶ್ಯ

Mainashree
Updated On : 24 Mar 2013, 11:16 am

ಗಜೇಂದ್ರಗಡ: ಮೌಲ್ಯಾಧಾರಿತ ಶಿಕ್ಷಣ ಮನುಷ್ಯ ಪರಿಪೂರ್ಣ ವಿಕಸನಗೊಳ್ಳಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಗುರುವಿನ ಸನ್ಮಾರ್ಗದಲ್ಲಿ ನಡೆದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಮಹಿಳಾ ಮಂಡಳ ಅಧ್ಯಕ್ಷೆ ಸಂಯುಕ್ತಾ ಬಂಡಿ ಹೇಳಿದರು.
ಈಚೆಗೆ ಅವರು ಸ್ಥಳೀಯ ಜ್ಞಾನ ಜ್ಯೋತಿ ಎಜ್ಯುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟನ ಬ್ರೈಟ್ ಮೈಂಟ್ ಪೂರ್ವ ಪ್ರಾಥಮಿಕ ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಜೀವನ ಮೌಲ್ಯ ಅರಿಯಲು ಗುರುಬೇಕು. ಆಧುನಿಕ ಯುಗದಲ್ಲಿ ವಿದ್ಯಾರ್ಜನೆಗೆ ವಿವಿಧ ಮಾರ್ಗಗಳಿದ್ದರೂ ಮೌಲ್ಯಯುಕ್ತ ಶಿಕ್ಷಣ ಸಮಾಜದ ಸ್ವಾಸ್ಥ್ಯ ಕಾಪಾಡುತ್ತದೆ. ಈ ದಿಸೆಯಲ್ಲಿ ಅಂತಹ ಶಿಕ್ಷಣ ಪಡೆದು ಸಮಾಜದ ಮತ್ತು ದೇಶದ ಉನ್ನತಿಗಾಗಿ ಶ್ರಮಿಸುವಂತಹ ನಾಯಕರು ನೀವಾಗಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು. ಪ್ರೊ. ಬಿ.ಎ. ಕೆಂಚರೆಡ್ಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಿಕ್ಷಣದ ಮೌಲ್ಯ ಕುಸಿಯುತ್ತಿದೆ. ನಮ್ಮೆಲ್ಲರ ಬದುಕು ತುಂಬಾ ಸಂಕೀರ್ಣವಾಗಿದೆ. ಎಷ್ಟೇ ಪ್ರತಿಷ್ಠಿತ ವ್ಯಕ್ತಿಗಳಾಗಿದ್ದರೂ ಜೀವನದಲ್ಲಿ ಒಂದಿಲ್ಲೊಂದು ಹಂತದಲ್ಲಿ ನಮಗೆ ಗುರುವಿನ ಅಗತ್ಯವಿದೆ. ಯುವಶಕ್ತಿ ಗುರು ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು ಎಂದರು. ಪ್ರೊ. ಬಿ.ಕೆ. ಮಾದಿ, ಮುತ್ತಣ್ಣ ಮ್ಯಾಗೇರಿ ಮಾತನಾಡಿದರು. ಈ ಸಂದರ್ಭದಲ್ಲಿ ಬಿ.ಎಂ. ಸಜ್ಜನರ, ಬಿ.ಕೆ. ಪುರ್ತಗೇರಿ, ವೀರಣ್ಣ ಬಿದರಳ್ಳಿ, ಶರಣಪ್ಪ ಚೋಳಿನ, ವಿಶಾಲ ಕಡ್ಡಿ, ಮಂಜುನಾಥ ಕೊಡೆಕಲ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement