ವಚನ ಸಂಗೀತ
ಗದಗ : ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಶೀಲ ಯುವಕ ಸಂಘದ ಆಶ್ರಯದಲ್ಲಿ ನಡೆದ 2111ನೇ ಶಿವಾನುಭವದಲ್ಲಿ ನಗರದ ಸರಸ್ವತಿ ಸಂಗೀತ ಸಾಧನ ಕೇಂದ್ರದ ವತಿಯಿಂದ ವಚನ ಸಂಗೀತ ಕಾರ್ಯಕ್ರಮ ಜರುಗಿತು. ಸಂಗೀತ ಶಿಕ್ಷಕಿ ದೀಪ್ತಿ ಪಾಠಕ ನೇತೃತ್ವದಲ್ಲಿ ಮಂಜುಳಾ ತೆಂಬದಮನಿ, ರೇಖಾ ಕುಲಕರ್ಣಿ, ರಾಜೇಶ್ವರಿ ಸಂತೋಜಿ, ವಿಜಯಲಕ್ಷ್ಮೀ ಗೋಡೆ, ಪುಷ್ಪಾ ಭಂಡಾರಿ, ಸುನಂದಾ ಮಾಳೆಕೊಪ್ಪಮಠ ಇವರಿಂದ ವಚನ ಸಂಗೀತ ಕಾರ್ಯಕ್ರಮ ಜರುಗಿತು.