ಮಕ್ಕಳಿಗೆ ಹೆಲಿಕಾಪ್ಟರ್ ಪ್ರಾತ್ಯಕ್ಷಿಕೆ
ಲಕ್ಷ್ಮೇಶ್ವರ: ಪಟ್ಟಣದ ಚಂದನ ಶಾಲೆಯ ಮಕ್ಕಳಿಗೆ ಹೆಲಿಕಾಪ್ಟರ್ ಹಾರಾಟ, ಕಾರ್ಯನಿರ್ವಹಣೆಯ ಬಗ್ಗೆ ಪ್ರತ್ಯಕ್ಷ ಪ್ರಾತ್ಯಕ್ಷಿಕೆ, ಹೆಲಿಕಾಪ್ಟರ್ ಚಾಲನೆ, ಎಂಜಿನ್ ವ್ಯವಸ್ಥೆ, ಲ್ಯಾಂಡಿಂಗ್ ನಿರ್ವಹಣೆ ಬಗ್ಗೆ ಹೆಲಿಕಾಪ್ಟರ್‌ನ ಪೈಲಟ್‌ಗಳಾದ ಮನೋಜ್‌ಗುಪ್ತಾ ಹಾಗೂ ರಾಕೇಶ ಶರ್ಮಾ ಪ್ರಾಯೋಗಿಕವಾಗಿ ಮಕ್ಕಳಿಗೆ ವಿವರಣೆ ನೀಡಿದರು.
ಬುಧವಾರ ಬೆಳಗ್ಗೆ ನಿಗದಿತ ವೇಳೆಗೆ ಪಟ್ಟಣದ ಪುರಸಭಾ ಮಹಾವಿದ್ಯಾಲಯದ ಮೈದಾನಕ್ಕೆ ಬಂದಿಳಿದ ಹೆಲಿಕಾಪ್ಟರ್ ನೋಡಲು ಸಾರ್ವಜನಿಕರು, ಮಕ್ಕಳು ಕುತೂಹಲದಿಂದ ತಂಡೋಪತಂಡವಾಗಿ ಬಂದು ಅದರ ಮುಂದೆ ನಿಂತು ಪೋಟೋ ತೆಗೆಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು. ನಂತರ ಚಂದನ ಶಾಲೆ ಮಕ್ಕಳಿಗೆ ಕ್ರಮಬದ್ಧವಾಗಿ ಪೈಲಟ್‌ಗಳು ಹೆಲಿಕ್ಯಾಪ್ಟರ್ ಎಂಥ ಸಂದರ್ಭದಲ್ಲಿ ಲ್ಯಾಂಡಿಂಗ್ ಮಾಡಬೇಕು. ಎಷ್ಟು ಜನರು ಅದರಲ್ಲಿ ಕುಳಿತುಕೊಳ್ಳಬಹುದು, ಎಂಜಿನ್‌ನ ಸಾಮರ್ಥ್ಯ, ಎಷ್ಟು ಎತ್ತರದಲ್ಲಿ ಹಾರಾಟ ಮಾಡಬಹುದು ಎನ್ನುವ ಕುರಿತಂತೆ ಹಲವು ವಿಷಯ ಹಾಗೂ ಕಾರ್ಯವಿಧಾನದ ಬಗ್ಗೆ ಮಾಹಿತಿ ನೀಡಿದರು. ಮಕ್ಕಳು ಹೆಲಿಕಾಪ್ಟರ್ ಮುಟ್ಟಿ ನೋಡಿ ಸಂತಸ ಪಟ್ಟರು. ಶಾಲೆಯ ಸಂಸ್ಥಾಪಕ ಅಧ್ಯಕ್ಷ ಟಿ. ಈಶ್ವರ ಮಕ್ಕಳಿಗೆ ದೇಶದ ಮಹಾನ್ ಸಾಹಿತಿಗಳ, ವಿಜ್ಞಾನಿಗಳ, ಉನ್ನತ ಮಟ್ಟದ ಅಧಿಕಾರಿಗಳ, ಬರಹಗಾರರ, ರಾಜಕಾರಿಣಿಗಳ ಪ್ರತ್ಯಕ್ಷ ದರ್ಶನ, ಅವರೊಂದಿಗೆ ಮಕ್ಕಳ ಸಂವಾದ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮಕ್ಕಳಲ್ಲಿ ಆಮೂಲಾಗ್ರ ಬದಲಾವಣೆ ತರುವಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಇಂದಿನ ಈ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಶಿವಣ್ಣ ಲಮಾಣಿ, ಶಿವಣ್ಣ ನೆಲವಿಗಿ ಪ್ರಾಚಾರ್ಯ ಚಂದ್ರಹಾಸ ಪಟಗಾರ ಹಾಜರಿದ್ದರು.