ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಸತಿ ಶಾಲೆ ಪರೀಕ್ಷೆ: 916 ವಿದ್ಯಾರ್ಥಿಗಳು ಹಾಜರ್

Rashmi Kasaragodu
Updated On : 25 Mar 2013, 10:39 am

ಕನ್ನಡಪ್ರಭ ವಾರ್ತೆ, ರೋಣ, ಮಾ. 24
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಜರುಗಿದ 2013-2014ನೇ ಸಾಲಿನ 6ನೇ ತರಗತಿಗೆ ಮೊರಾರ್ಜಿ ದೇಶಾಯಿ, ಕಿತ್ತೂರ ರಾಣಿ ಚೆನ್ನಮ್ಮ, ಏಕಲವ್ಯ ಮಾದರಿ ಮತ್ತು ಅಟಲ್ ಬಹಾರಿ ವಾಜಪೇಯಿ ವಸತಿ ಶಾಲೆಗಳ ದಾಖಲಾತಿ ಪ್ರವೇಶಕ್ಕಾಗಿ ಭಾನುವಾರ ಪಟ್ಟಣದ ವಿ.ಎಫ್. ಪಾಟೀಲ್ ಪ್ರೌಢಶಾಲೆ, ಸರ್ಕಾರಿ ಸ್ವತಂತ್ರ ಪಪೂ ಕಾಲೇಜು ಮತ್ತು ಸರ್ಕಾರಿ ಪ್ರೌಢಶಾಲೆ ಕೇಂದ್ರಗಳಲ್ಲಿ ಜರುಗಿದ ಪರೀಕ್ಷೆಗೆ ತಾಲೂಕಿನ 916 ವಿದ್ಯಾರ್ಥಿಗಳು ಹಾಜರಾಗಿದ್ದರು.
ಒಟ್ಟು 936 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದರು. ಅದರಲ್ಲಿ 20 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಗದಗ ಜಿಲ್ಲೆಯಲ್ಲಿ ಒಟ್ಟು 9 ವಸತಿ ಶಾಲೆಗಳಿವೆ. ರೋಣ ತಾಲೂಕಿನಲ್ಲಿ ರಾಣಿ ಚೆನ್ನಮ್ಮ, ಮೊರಾರ್ಜಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗಳಿವೆ ಎಂದು ತಾಲೂಕು ಸಮಾಜ ಕಲ್ಯಾಣ ಅಧಿಕಾರಿ, ವಿಶೇಷ ಪರಿವೀಕ್ಷಕ ಪ್ರಶಾಂತ ವರಗಪ್ಪನವರ ತಿಳಿಸಿದರು. ಮೂರು ಕಡೆಗಳಲ್ಲಿ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಾಗಿ ಎ.ಬಿ. ಹೊನ್ನವಾಡ, ಪಿ.ಎಚ್. ಕಡಿವಾಲ ಮತ್ತು ಎಸ್.ಎಸ್. ಕಡಿವಾಲ ಕಾರ್ಯ ನಿರ್ವಹಿಸಿದರು.



ಕೈ ಮುರಿದಿದ್ದರೂ...
ಸ್ನೇಹಿತರೊಂದಿಗೆ ಕಳೆದ ವಾರ ಆಟವಾಡುತ್ತಿದ್ದಾಗ ಬಲಗೈ ಮೂಳೆ ಮುರಿದುಕೊಂಡಿದ್ದ ಬಾಲಕ ಯಾವಗಲ್ ಗ್ರಾಮದ ಪ್ರವೀಣ ಚನ್ನಬಸಪ್ಪ ಘಾಳಿ ಛಲದಿಂದ ವಿ.ಎಫ್.ಪಾಟೀಲ್ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಿ, ಎಡಗೈಯಿಂದಲೇ ಪರೀಕ್ಷೆ ಬರೆದು ಉಳಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೆರಗಾಗುವಂತೆ ಮಾಡಿದ್ದಾನೆ. ವಸತಿ ಶಾಲೆಗೆ ಪ್ರವೇಶ ಪಡೆಯುವ ಸಲುವಾಗಿ ಸತತ ಅಭ್ಯಾಸ ಮಾಡಿದ್ದೇನೆ. ಅದು ವ್ಯರ್ಥವಾಗಬಾರದು ಎಂಬ ಉದ್ದೇಶದಿಂದ ಧೃತಿಗೆಡದೆ ಪರೀಕ್ಷೆ ಬರೆದಿದ್ದೇನೆ ಎಂದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement